ಗುಳೇದಗುಡ್ಡದಲ್ಲಿ ವಿಶಾಲ (ಎಂ.ಆರ್.ಎನ್) ಸೌಹಾರ್ದ ಪತ್ತಿನ ಸಹಕಾರಿ ಸಂಘದ ಗುಳೇದಗುಡ್ಡ ಶಾಖೆಯನ್ನು ಭಾನುವಾರ ಉದ್ಘಾಟಿಸಲಾಯಿತು. 
ಜಿಲ್ಲೆ

ಯುವಕರು ಸ್ವಂತ ಉದ್ಯಮಿಗಳಾಗಲಿ

ಗುಳೇದಗುಡ್ಡ: ಯುವಕರು ಸರ್ಕಾರಿ, ಅರೆಸರ್ಕಾರಿ ನೌಕರಿ ಬೆನ್ನು ಹತ್ತದೆ ಸರ್ಕಾರ ನೀಡುವ ಸೌಲಭ್ಯ, ಸಹಾಯಧನ ಪಡೆದು ಸ್ವಂತ ಉದ್ಯೋಗ ಸ್ಥಾಪಿಸುವ ಮೂಲಕ ಇತರರಿಗೆ ಉದ್ಯೋಗ ನೀಡುವ ಕೆಲಸ ಮಾಡಲು ಮುಂದೆ ಬರಬೇಕೆಂದು ಮಾಜಿ ಸಚಿವ ಮುರಗೇಶ ನಿರಾಣಿ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶಾಲ (ಎಂ.ಆರ್.ಎನ್) ಸೌಹಾರ್ದ ಪತ್ತಿನ ಸಹಕಾರಿ ಸಂಘದ ನಿಯಮಿತದ ಗುಳೇದಗುಡ್ಡ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೇವಲ 10 ಲಕ್ಷ ರೂ. ಬಂಡವಾಳದಲ್ಲಿ ಸಣ್ಣ ಸಕ್ಕರ ಕಾರ್ಖಾನೆಯಿಂದ ಪ್ರಾರಂಭಗೊಂಡ ನಿರಾಣಿ ಉದ್ಯಮ ಸಮೂಹ ಇಂದು 500 ಟನ್ ಕಬ್ಬು ಅರೆಯವ ಹಂತಕ್ಕೆ ಬೆಳೆದಿದೆ. ಎಥೆನಾಲ್ ಉತ್ಪಾದನೆಯಲ್ಲಿ ನಿರಾಣಿ ಸಮೂಹ ಏಷ್ಯಾದಲ್ಲೇ ಪ್ರಥಮ ಸ್ಥಾನದಲ್ಲಿದ್ದು, ಮುಂದಿನ ದಿನಗಳಲ್ಲಿ ಎಥೆನಾಲ್ ಉತ್ಪಾದನೆಯಲ್ಲಿ ಜಗತ್ತಿನಲ್ಲೇ ಪ್ರಥಮ ಸ್ಥಾನ ಪಡೆಯುವ ಗುರಿಹೊಂದಲಾಗಿದೆ. ಸಾಮಾನ್ಯ ರೈತ ಕುಟುಂಬದಿಂದ ಬಂದ ನಾನು ಇದನೆಲ್ಲ ಸಾಧಿಸಿದ್ದು ಕೇವಲ ಪರಿಶ್ರಮದಿಂದ. ಪರಿಶ್ರಮದಿಂದ ಏನನ್ನಾದರೂ ಸಾಧಿಸಬಹುದು ಎಂದರು.

ವಿಪ ಸದಸ್ಯ ಹಣಮಂತ ನಿರಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮುರುಘಾಮಠದ ಶ್ರೀ ಕಾಶೀನಾಥ ಸ್ವಾಮಿಗಳು, ಮಾಜಿ ಶಾಸಕರಾದ ರಾಜಶೇಖರ ಶೀಲವಂತ, ಎಂ.ಕೆ. ಪಟ್ಟಣಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಮಾತನಾಡಿದರು.

ಮಾಜಿ ಶಾಸಕ ಮಲ್ಲಿಕಾರ್ಜುನ ಬನ್ನಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಮಾರಗೌಡರ ಜನಾಲಿ, ಹೊಳಬಸು ಶೆಟ್ಟರ್, ಸಂಜಯ ಬರಗುಂಡಿ, ಮಹಾಂತೇಶ ಮಮದಾಪುರ, ಪಿ.ಆರ್. ಗೌಡರ, ಚಂದ್ರಕಾಂತ ಶೇಖಾ, ಆಸಂಗೆಪ್ಪ ನಕ್ಕರಗುಂದಿ, ಲಕ್ಷ್ಮಣ ನಿರಾಣಿ, ಸಲಹಾ ಸಮಿತಿಯ ಮುತ್ತಣ್ಣ ಕಳ್ಳಿಗುಡ್ಡ, ಅಶೋಕ ಹೆಗಡೆ, ಜಿ.ಎಸ್. ದೇಸಾಯಿ, ಕೃಷ್ಣ ಓಗೆನ್ನವರ, ಪ್ರಮೋದ ಕವಡಿಮಟ್ಟಿ, ಮಹಾಲಿಂಗೇಶ ನಾಡಗೌಡರ, ತಮ್ಮಣ್ಣೆಪ್ಪ ಬೆನಕಟ್ಟಿ, ಯಲ್ಲಪ್ಪ ಬಸರಕೋಡ, ಗೋಪಾಲ ಮಾಲಪಾಣಿ, ಭಾಗ್ಯಾ ಉದ್ನೂರ ಮತ್ತಿತರರಿದ್ದರು.