ರೋಣ: ಧಾರ್ವಿುಕ ಚಿಂತನೆ, ಆಚರಣೆ ಮೂಲಕ ಧರ್ಮವನ್ನು ನಾವು ರಕ್ಷಣೆ ಮಾಡಿದಾಗ ಧರ್ಮವು ನಮ್ಮನ್ನು ರಕ್ಷಣೆ ಮಾಡುತ್ತದೆ. ಧಾರ್ವಿುಕ ಆಚರಣೆ ಬಗ್ಗೆ ಇಂದಿನ ಯುವ ಪೀಳಿಗೆಗೆ ಇಂತಹ ಕಾರ್ಯಕ್ರಮಗಳು ಉತ್ಸಾಹ ತುಂಬಲಿವೆ ಎಂದು ಕರ್ನಾಟಕ ವಿದ್ಯುತ್ ಮಂಡಳಿ ರೋಣದ ಅಧಿಕಾರಿ ರಾಘವೇಂದ್ರ ಸಾಲಿಮನಿ ಹೇಳಿದರು.
ತಾಲೂಕಿನ ಸವಡಿ ಗ್ರಾಮದ ಶ್ರೀ ಸಂಗಮೇಶ್ವರ ನೂತನ ರಥ ಲೊಕಾರ್ಪಣೆ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಜರುಗಿದ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಪುರಾಣ, ಪ್ರವಚನಗಳಿಂದ ಧಾರ್ವಿುಕ ಚಿಂತನೆಗಳ ಹಾಗೂ ಹಿಂದಿನ ಕಾಲದ ಸಾಧು ಸಂತರುಗಳ ಜೀವನ ಚರಿತ್ರೆ ಧಾರ್ವಿುಕ ಆಚರಣೆ, ನಮ್ಮ ಸಂಸ್ಕೃತಿ, ಸಂಸ್ಕಾರಗಳನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಇಂದಿನ ಯುವ ಪೀಳಿಗೆಯು ಟಿ.ವಿ., ಮೊಬೈಲ್ ಹಾಗೂ ಪಾಶ್ಚಿಮಾತ್ಯ ಆಚರಣೆಯ ಮೂಲಕ ನಮ್ಮ ಸಂಸ್ಕೃತಿ, ಸಂಸ್ಕಾರಗಳನ್ನು ಮರೆಯುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳ ಮೂಲಕ ಅವರಿಗೆ ನಮ್ಮ ಸಂಸ್ಕೃತಿ, ಸಂಸ್ಕಾರ ಧಾರ್ವಿುಕ ಆಚರಣೆಗಳ ಬಗ್ಗೆ ಅರಿವು ಮೂಡಲಿದೆ ಎಂದರು.
ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮಿಗಳು ಆಶೀರ್ವಚನ ನೀಡಿ, ಸವಡಿ ಗ್ರಾಮವು ಧಾರ್ವಿುಕವಾಗಿ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿದ್ದು, ಗ್ರಾಮದ ಜನರು ಧಾರ್ವಿುಕ ಆಚರಣೆಗಳ ಬಗ್ಗೆ ಅಪಾರವಾದ ಭಕ್ತಿಯನ್ನು ಹೊಂದಿದ್ದಾರೆ. ಇನ್ನು ಹತ್ತು ದಿನಗಳ ಕಾಲ ಉತ್ತಮ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಮಂಜುನಾಥ ಗದಗ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಯಲ್ಲಮ್ಮ ಎಲಿಗಾರ, ಕಿತ್ತೂರಿನ ಓಂ ಮಹಾಸ್ವಾಮಿಗಳು, ಲಕ್ಷ್ಮೀಕಾಂತ ಕಟ್ಟಿ, ಕಮಿಟಿ ಸದಸ್ಯರಾದ ಶೇಖರಪ್ಪ ಮ್ಯಾಗೇರಿ, ಅಶೋಕ ಪವಾಡಶೆಟ್ಟಿ, ಸಂಗಪ್ಪ ಪಟ್ಟಣಶೆಟ್ಟಿ, ಶ್ರೀಶೈಲ ಕತ್ತಿ, ರುದ್ರಪ್ಪ ಪರಡ್ಡಿ, ಶಂಕರಯ್ಯ ಹಿರೇಮಠ, ಶಿವನಗೌಡ ವೀರನಗೌಡ, ಇತರರಿದ್ದರು. ಚನ್ನಮಲ್ಲಪ್ಪ ಗದಗ ಸ್ವಾಗತಿಸಿದರು, ಸಂಗಮೇಶ ಮಣ್ಣೂರ, ಬಸವರಾಜ ಗುಳೇದ ಕಾರ್ಯಕ್ರಮ ನಿರ್ವಹಿಸಿದರು.