ಜಿಲ್ಲೆ

ಯುವಪೀಳಿಗೆ ಗಾಂಧಿ ಆದರ್ಶ ಮೈಗೂಡಿಸಿಕೊಳ್ಳಲಿ

ಸಂಸದ ಎಂ.ಮಲ್ಲೇಶ್​ಬಾಬು ಅಭಿಮತ | ಸ್ವರಾಜ್ಯ ಮಾದರಿಯಲ್ಲಿ ದೇಶ ಅಭಿವೃದ್ಧಿ

ಕೋಲಾರ: ಯುವಪೀಳಿಗೆ ಗಾಂಧೀಜಿ ಅವರು ನಡೆದುಬಂದ ದಾರಿ ಮತ್ತು ಆದರ್ಶಗಳನ್ನು ಪಾಲಿಸಬೇಕು. ದೇಶ&ವಿದೇಶಗಳಲ್ಲಿ ಯುದ್ಧ ಮತ್ತು ಹೋರಾಟದ ಧ್ವನಿ ಕೇಳುತ್ತಿದೆ. ಆದರೆ ಗಾಂಧಿ ಅವರು ಅಹಿಂಸಾ ತತ್ವದ ಮೂಲಕ ಸ್ವಾತಂತ್ರ$್ಯ ಪಡೆದುಕೊಳ್ಳಬಹುದು ಎಂದು ತೋರಿಸಿಕೊಟ್ಟಿದ್ದಾರೆ ಎಂದು ಸಂಸದ ಎಂ.ಮಲ್ಲೇಶ್​ಬಾಬು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗಾಂಧಿ ಜಯಂತಿ ಮತ್ತು ಲಾಲ್​ ಬಹಾದೂರ್​ ಶಾಸ್ತ್ರಿ ಜಯಂತಿಯಲ್ಲಿ ಮಾತನಾಡಿ, ಗಾಂಧೀಜಿ ಗ್ರಾಮ ಸ್ವರಾಜ್ಯವಾದರೆ ದೇಶ ಅಭಿವೃದ್ಧಿಯಾಗಲಿದೆ ಎಂದಿದ್ದಾರೆ, ಈ ನಿಟ್ಟಿನಲ್ಲಿ ನಾವು ಜಿಲ್ಲೆಯಲ್ಲಿ ಬಯಲು ಶೌಚ ಮುಕ್ತವಾಗಿಸಬೇಕು ಎಂದರು.

ಜಿಲ್ಲಾಧಿಕಾರಿ ಡಾ.ಎಂ.ಆರ್​. ರವಿ ಮಾತನಾಡಿ, ದೇಶಕ್ಕಾಗಿ ಹೋರಾಡಿದ ಗಾಂಧಿಜಿ ಅವರ ತತ್ವ ಸಿದ್ಧಾಂತವನ್ನು ಎಲ್ಲರೂ ಅನುಸರಿಸಬೇಕು. ಗಾಂಧಿಜೀಯವರ ಹೋರಾಟಕ್ಕೆ ಜಿಲ್ಲೆಯಲ್ಲಿಯೂ ಸಾಕಷ್ಟು ಹೋರಾಟಗಾರರು ಸಾಥ್​ ನೀಡಿದ್ದಾರೆ. ಅಂತಹವರನ್ನು ಗುರುತಿಸಿ ನೆನೆಯುವಂತಹ ಕೆಲಸ ಮಾಡಬೇಕು ಎಂದರು.

ಜಿಲ್ಲಾಡಳಿತ ಭವನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ವಿತರಣೆ ಮಾಡಲಾಯಿತು.

ಗಾಂಧಿವನದಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಎಲ್ಲ ಧರ್ಮಗುರುಗಳಿಂದ ಧರ್ಮಗ್ರಂಥಗಳ ಸಂದೇಶ ಮತ್ತು ಶಾಲಾ ಮಕ್ಕಳಿಂದ ಭಜನಾ ಕಾರ್ಯಕ್ರಮಗಳು ನಡೆದವು.