ಓಣಂ ಆಚರಣೆ ಸಮಾರಂಭದಲ್ಲಿ ದಾನಿಗಳು ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಅಪ್ಪಚ್ಚು ರಂಜನ್, ವಿ.ಎಂ.ವಿಜಯ್, ಜಯಲಕ್ಷ್ಮೀ ಚಂದ್ರು ಇತರರು ಇದ್ದರು. 
ಜಿಲ್ಲೆ

ಯುವ ಪೀಳಿಗೆ ಹಿಂದು ಸಂಸ್ಕೃತಿ ಮುಂದುವರೆಸಲಿ

ಕುಶಾಲನಗರ: ಹಿಂದು ಸಂಸ್ಕೃತಿ ಮೇಳೈಸುವ ಸುಂದರ ಆಚರಣೆ ಓಣಂ ಎಂದು ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಹೇಳಿದರು.

ಕುಶಾಲನಗರದ ಕೇರಳ ಸಮಾಜದಿಂದ ಭಾನುವಾರ ಆಯೋಜಿಸಿದ್ದ ಓಣಂ ಆಚರಣೆ ಸಮಾರಂಭದಲ್ಲಿ ಮಾತನಾಡಿ, ಇಂದಿನ ಪೀಳಿಗೆಯ ಮಕ್ಕಳು ಗುರು, ಹಿರಿಯರು ಹಾಗೂ ಪಾಲಕರಿಗೆ ಗೌರವ ನೀಡುವ ಸಂಸ್ಕೃತಿಯೊಂದಿಗೆ ವಿದ್ಯಾವಂತರಾಗಿ ದೇಶಕ್ಕೆ ಗೌರವ ತರಬೇಕು ಎಂದು ಕರೆಕೊಟ್ಟರು.
ಹಿಂದು ಮಲೆಯಾಳಿ ಸಮಾಜದ ಕೊಡಗು ಜಿಲ್ಲಾಧ್ಯಕ್ಷ ವಿ.ಎಂ. ವಿಜಯ್ ಮಾತನಾಡಿ, ಕಳೆದು ಹೋಗುತ್ತಿರುವ ಹಿಂದು ಸಂಸ್ಕೃತಿ ಸಂಪ್ರದಾಯಗಳನ್ನು ಜೋಪಾನ ಮಾಡುವ ಹೊಣೆಗಾರಿಕೆ ಮಹಿಳೆಯರ ಮೇಲಿದೆ ಎಂದರು.


ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮೀ ಚಂದ್ರು, ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ ಮುರುಳಿ, ಮಡಿಕೇರಿ ಎಸ್‌ಎನ್‌ಡಿಪಿ ಅಧ್ಯಕ್ಷ ಹರೀಶ್ ಕುಮಾರ್, ವಾಸು, ಕೇರಳ ಸಮಾಜದ ಉಪಾಧ್ಯಕ್ಷ ಕೆ.ಬಾಬು, ಕಾರ್ಯದರ್ಶಿ ರಾಬಿನ್, ನಿರ್ದೇಶಕರಾದ ರಾಯ್, ಎಂ.ಜೆ.ಪ್ರಕಾಶ್, ಸುಶೀಲಾ, ಎಂ.ಎಸ್.ಶಾಂತಿ, ಆನಂದ್, ರಂಜಿತ್ ಕುಮಾರ್, ಧನರಾಜ್, ಅಜಿತ ಧನರಾಜ್ ಇದ್ದರು.

ಮಾವೇಲಿ ವೇಷಧಾರಿಯಾಗಿ ಕಣ್ಣೂರಿನ ರಾರೀಶ್ ಗಮನ ಸೆಳೆದರು. ಕಾರ್ಯಕ್ರಮಕ್ಕೂ ಮೊದಲು ಕೇರಳ ಸಮಾಜದ ಸ್ಥಾಪಕ ಅಧ್ಯಕ್ಷ ಕೆ.ಶಿವಾನಂದನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ದಾನಿಗಳು ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಫೋಟೋ: