ಅಡ್ಡಗದ್ದೆ ಗ್ರಾಪಂನಲ್ಲಿ ರೈತನಿಧಿ-ಜ್ಞಾನನಿಧಿ-ಸೈನಿಕ ಸಮ್ಮಾನ್-ಸಾಧಕ ರೈತ ಸಮ್ಮಾನ್ ಯೋಜನೆಗಳ ಕಾರ್ಯಕ್ರಮದಲ್ಲಿ 74 ಕೃಷಿಕರಿಗೆ ತಲಾ 1000 ಸಹಾಯಧನ ವಿತರಿಸಲಾಯಿತು. ರಾಘವೇಂದ್ರ ಹಂಚಲಿ, ವಿನೋದಾ, ಜ್ಞಾನೇಶ್, ರಂಜಿತ್, ಶೈಲೇಶ್, ಸುಂದರೇಶ್ ಇತರರಿದ್ದರು. 
ಜಿಲ್ಲೆ

ಯುವ ಕೃಷಿಕರು ಭತ್ತದ ಕೃಷಿಯಲ್ಲಿ ಆಸಕ್ತಿ ಬೆಳೆಸಿಕೊಳ್ಳಲಿ

ಶೃಂಗೇರಿ: ವಾಣಿಜ್ಯ ಬೆಳೆಗಳಿಗೆ ಹೆಚ್ಚಿನ ಪ್ರಾಮುಖ್ಯ ನೀಡುತ್ತಿರುವುದರಿಂದ ಅಡ್ಡಗದ್ದೆ ಗ್ರಾಪಂ ವ್ಯಾಪ್ತಿಯಲ್ಲಿ ಭತ್ತದ ಕೃಷಿಗೆ ಮಹತ್ವ ಕಡಿಮೆಯಾಗಿದೆ. ರೈತರು ಭತ್ತದ ಕೃಷಿ ಬಿಡಬಾರದು. ಭವಿಷ್ಯದಲ್ಲಿ ಭತ್ತ ಬೆಳೆ ಮತ್ತಷ್ಟು ಹೆಚ್ಚಾಗಬೇಕು ಎಂದು ಅಡ್ಡಗದ್ದೆ ಗ್ರಾಪಂ ಅಧ್ಯಕ್ಷ ರಾಘವೇಂದ್ರ ಹಂಚಲಿ ತಿಳಿಸಿದರು.

ಬುಧವಾರ ಅಡ್ಡಗದ್ದೆ ಗ್ರಾಪಂನಲ್ಲಿ ಗ್ರಾಮಭಾರತ್ ವೇದಿಕೆ ಟ್ರಸ್ಟ್ ಮತ್ತು ಗ್ರಾಪಂನಿಂದ ರೈತನಿಧಿ-ಜ್ಞಾನನಿಧಿ-ಸೈನಿಕ ಸಮ್ಮಾನ್-ಸಾಧಕ ರೈತ ಸಮ್ಮಾನ್ ಯೋಜನೆಗಳ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಲೂಕಿನಲ್ಲಿ ಶೇ.80 ರೈತರಿದ್ದು ಕೃಷಿ ಸವಾಲುಗಳನ್ನು ಸ್ವೀಕರಿಸಿ ಆರ್ಥಿಕ ಸಬಲತೆ ಪಡೆಯಬೇಕು. ಸ್ವಾವಲಂಬಿ ಜೀವನ ಆತ್ಮ ಗೌರವದ ಪ್ರತೀಕ. ಗ್ರಾಮಭಾರತ್ ಟ್ರಸ್ಟ್ ಕೃಷಿಕರಿಗೆ ಸಹಕಾರ ನೀಡಲಿದೆ. ಗ್ರಾಮದ ಹೊಸ ತಲೆಮಾರಿನವರು ಕೃಷಿಗೆ ಆದ್ಯತೆ ನೀಡಬೇಕು ಎಂಬ ಉದ್ದೇಶದಿಂದ ತೊರೆಹಡ್ಲು ಪ್ರೌಢಶಾಲಾ ವಿದ್ಯಾರ್ಥಿಗಳು ಭತ್ತದ ನಾಟಿ ಅನುಭವ ಪಡೆದರೆ ಅವರಿಗೆ 250 ರೂ. ಪ್ರೋತ್ಸಾಹ ಧನ ನೀಡಲಾಗುವುದು ಎಂದರು.
ನಿವೃತ್ತ ಯೋಧ ಜ್ಞಾನೇಶ್ ಮಾತನಾಡಿ, ಯುವಶಕ್ತಿ ಸೇನೆ ಸೇರಲು ಆಸಕ್ತಿ ಬೆಳೆಸಿಕೊಳ್ಳಬೇಕು. ದೇಶಸೇವೆ ಮಾಡುವುದು ಪರಮಭಾಗ್ಯ ಎಂದರು.
74 ರೈತರಿಗೆ ತಲಾ ಒಂದು ಸಾವಿರ ರೂ. ಸಹಾಯಧನ ವಿತರಿಸಲಾಯಿತು. ನಿವೃತ್ತ ಸೈನಿಕ ಜ್ಞಾನೇಶ್ ಅವರನ್ನು ಸನ್ಮಾನಿಸಿ ಸೈನಿಕ ನಿಧಿಗೆ 50 ಸಾವಿರ ರೂ. ನೀಡಲಾಯಿತು.
ಗ್ರಾಮಭಾರತ್ ವೇದಿಕೆ ಟ್ರಸ್ಟ್ ಅಧ್ಯಕ್ಷ ರಂಜಿತ್, ಗ್ರಾಪಂ ಉಪಾಧ್ಯಕ್ಷೆ ವಿನೋದ್ ಆಚಾರ್, ಕೃಷ್ಣಮೂರ್ತಿ, ಸುಂದರೇಶ್, ಶೈಲೇಶ್‌ಕುಮಾರ್, ಅಶ್ವಿನಿ, ಪಿಡಿಒ ಪ್ರಮೋದ್ ಇದ್ದರು.