ಜಿಲ್ಲೆ

ಕಾರ್ವಿುಕರಿಗೆ ಸರ್ಕಾರದ ಸೌಲಭ್ಯ ದೊರಕಲಿ

ಬಸವರಾಜ ವೀರಪ್ಪ ಗರಗ

ಸವಣೂರ: ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ರಾಜ್ಯ ಕಟ್ಟಡ ಕಟ್ಟುವ ಮತ್ತು ಇತರ ನಿರ್ಮಾಣ ಕಾರ್ವಿುಕರ ಫೆಡರೇಶನ್ ತಾಲೂಕು ಸಮಿತಿ ಪದಾಧಿಕಾರಿಗಳು ಶುಕ್ರವಾರ ಪಟ್ಟಣದ ಕಾರ್ವಿುಕ ಇಲಾಖೆ ಕಾರ್ವಿುಕ ನಿರೀಕ್ಷಕ ಮಹಾಂತೇಶ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.

ಸರ್ಕಾರದ ಸೌಲಭ್ಯ ಪಡೆಯಲು, ಕಾರ್ವಿುಕ ಕಾರ್ಡ್ ನವೀಕರಣ, ರದ್ದಾದ ಕಾರ್ಡ್ ಆಕ್ಷೇಪಣೆ ಕುರಿತು ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ, ಬಡ ಕಾರ್ವಿುಕರು ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ. ಕೂಡಲೇ ಕಾರ್ವಿುಕರ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ 2025ರ ಜನವರಿ ಮೊದಲ ವಾರದಲ್ಲಿ ಪಟ್ಟಣದ ಕಾರ್ವಿುಕರ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.

ಫೆಡರೇಶನ್ ತಾಲೂಕು ಸಮಿತಿ ಪದಾಧಿಕಾರಿಗಳಾದ ಸಿ.ಜಿ. ಹಿರೇಮಠ, ಹಜರತಲಿ ನದಾಫ್, ಸಲಾಂಬಾಷಾ ಮುಲ್ಲಾ, ನಿಂಗನಗೌಡ ದೊಡ್ಡಮನಿ, ನಿಜಾಮ್ ಖಾಸೀಮನವರ, ಜಮೀರಖಾನ್ ಖರೀಮಖಾನನವರ, ಇತರರಿದ್ದರು.