ಆನೇಕಲ್​ ತಾಲೂಕಿನ ಸಮೀಪದ ಅಲೆಯನ್ಸ್​ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಇಂಟರ್​ನ್ಯಾಷನಲ್​ ಸ್ಕೂಲ್​ ಲೀಡರ್​ ಸಮ್ಮಿಟ್​ ಕಾರ್ಯಕ್ರಮವನ್ನು ಯದುವೀರ್​ ಒಡೆಯರ್​ ಉದ್ಘಾಟಿಸಿದರು. ಉಪ ಪ್ರಾಂಶುಪಾಲ ಡಾ.ಪ್ರೆಶ್ಟಶಾನ್​, ರಿಜಿಸ್ಟರ್​ ಜನರಲ್​ ಸುರೇಖ ಶೆಟ್ಟಿ, ಉಪ ಪ್ರಾಂಶುಪಾಲ ಡಾ.ರೇ.ಟೈಟಸ್​ ಇದ್ದರು. 
ಜಿಲ್ಲೆ

ಭಾರತೀಯ ಸಂಸತಿ ಬೆಳೆಸುವ ಕೆಲಸವಾಗಲಿ

ಆನೇಕಲ್​ : ಭಾರತ ಟೆಕ್ನಾಲಜಿ ಸೇರಿ ಪ್ರತಿಯೊಂದು ಕ್ಷೇತ್ರದಲ್ಲೂ ವೇಗವಾಗಿ ಬೆಳೆಯುತ್ತಿದೆ. ಅದರಂತೆ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆ ಸಾಧಿಸುತ್ತಿದ್ದೇವೆ ಎಂದು ಕೊಡಗು ಸಂಸದ ಹಾಗೂ ಮೈಸೂರು ಮಹಾರಾಜ ಯದುವೀರ್​ ಒಡೆಯರ್​ ಹೇಳಿದರು.

ಪಟ್ಟಣ ಸಮೀಪದ ಅಲೆಯನ್ಸ್​ ವಿಶ್ವವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಇಂಟರ್​ನ್ಯಾಷನಲ್​ ಸ್ಕೂಲ್​ ಲೀಡರ್​ ಸಮ್ಮಿಟ್​ ಕಾರ್ಯಕ್ರಮದಲ್ಲಿ ಮಾತನಾಡಿ, ಗುರು ಶಿಷ್ಯ ಪರಂಪರೆ ಹಾಗೂ ಧರ್ಮಗಳ ಪರಂಪರೆಯ ದೇಶ ನಮ್ಮದಾಗಿದ್ದು, ಭಾರತೀಯ ಸಂಸತಿ ಇಲ್ಲಿನ ನೆಲೆಗಟ್ಟು ನಮ್ಮೆಲ್ಲರನ್ನು ಬೆಸೆದಿದೆ ಎಂದರು.

ಭಾರತೀಯ ತತ್ವಶಾಸ್ತ್ರಗಳ ಪುನರುಜ್ಜೀವನ ಸ್ವದೇಶಿ ಜ್ಞಾನ ಆಧಾರಿತ ಶಿಕ್ಷಣ ವ್ಯವಸ್ಥೆಯ ಅಗತ್ಯ ಇದೆ. ಪಾಶ್ಚಾತ್ಯ ಸಂಸತಿ ನೋಡುವ ಬದಲು ಭಾರತೀಯ ಸಂಸತಿ ಉಳಿಸಿ&ಬೆಳೆಸಿದಾಗ ನಮ್ಮ ದೇಶ, ಸಂಸತಿ ಇಲ್ಲಿನ ಪರಂಪರೆಗಳು ಹಾಗೂ ಧರ್ಮಗಳು ಉಳಿಯಲು ಸಾಧ್ಯ ಎಂದರು.

ಶಿಕ್ಷಣದಲ್ಲಿ ರಾಜ್ಯ ಸರ್ಕಾರ ಕೆಲವು ಬದಲಾವಣೆ ತರುತ್ತಿದ್ದು, ಅದು ಶಿಕ್ಷಣಕ್ಕೆ ಪೂರಕವಾಗಿಲ್ಲ. ಇದನ್ನು ಎಲ್ಲರೂ ಕೂಡ ಪ್ರಶ್ನೆ ಮಾಡಬೇಕು ಎಂದು ಸಂಸದರು, ಕೇಂದ್ರ ಸರ್ಕಾರ ಕ್ರೀಡೆ ಸೇರಿ ಪ್ರತಿಯೊಂದಕ್ಕೂ ಉತ್ತಮ ಆದ್ಯತೆ ನೀಡುತ್ತಿದೆ ಎಂದರು.

ಅಲೆಯನ್ಸ್​ ವಿವಿಯ ಪ್ರೊ.ಚಾನ್ಸಲರ್​ ಅಭಯ್​ ಚಬ್ಬಿ ಮಾತನಾಡಿ, ಶಿಕ್ಷಣದಿಂದ ಮಾತ್ರ ದೇಶದ ಆರ್ಥಿಕ ಪರಿಸ್ಥಿತಿ ಸೇರಿ ಪ್ರತಿಯೊಂದರಲ್ಲೂ ಬದಲಾವಣೆ ತರಲು ಸಾಧ್ಯ. ಭಾರತ ಯುವ ಶಕ್ತಿಯ ಜತೆ ಮುಂದೆ ಸಾಗುತ್ತಿದ್ದು, ಪ್ರಪಂಚವೇ ನಮ್ಮ ದೇಶದತ್ತ ತಿರುಗಿ ನೋಡುವಂತೆ ಭಾರತ ಯಂಗ್​ ಜನರೇಷನ್​ ಜತೆ ಸಾಗುತ್ತಿದೆ ಎನ್ನುವುದನ್ನು ಅರಿತು ನಾವು ಇನ್ನಷ್ಟು ಗುಣಮಟ್ಟದ ಶಿಕ್ಷಣದ ಜತೆಗೆ ಹಳ್ಳಿಯಿಂದ ಪಟ್ಟಣದವರೆಗೂ ಮುಂದೆ ಸಾಗಬೇಕು ಎಂದರು.

ಪೆಪ್ಪರ್​ ಬೆಳೆಗಿಲ್ಲ ಜಿಎಸ್​ಟಿ : ಕೊಡಗು, ಸಕಲೇಶಪುರ, ದಕ್ಷಿಣ ಕನ್ನಡ ಭಾಗದಲ್ಲಿ ಪೆಪ್ಪರ್​ ಹೆಚ್ಚಾಗಿ ಬೆಳೆಯುತ್ತಾರೆ. ಆ ಭಾಗದ ರೈತರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಕೃಷಿಯನ್ನು ಜಿಎಸ್​ಟಿ ವ್ಯಾಪ್ತಿಯಿಂದ ಕೈಬಿಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಕೊಡಗು ಸಂಸದ ಹಾಗೂ ಮೈಸೂರು ಮಹಾರಾಜ ಯದುವೀರ್​ ಒಡೆಯರ್​ ಹೇಳಿದರು. ಅಂತೆಯೇ, ಕೊಡಗು ಹಾಗೂ ಕನಕಪುರ, ಆನೇಕಲ್​ ಭಾಗದಲ್ಲಿ ಆನೆ&ಮಾನವ ಸಂಘರ್ಷ ತಡೆಯಲು ಬೆಂಗಳೂರ ಗ್ರಾಮಾಂತರ ಸಂಸದರು ಹಾಗೂ ನಾವು ಸೇರಿ ಕೇಂದ್ರದಲ್ಲಿ ಚರ್ಚೆ ಮಾಡಿದ್ದು, ರೈಲ್ವೆ ಬ್ಯಾರಿಗೇಡ್​ಗೆ ಮನವಿ ಮಾಡಿದ್ದೇವೆ ಎಂದು ಹೇಳಿದರು.

ಕನ್ನಡ ವಿರೋಧಿ ಹೇಳಿಕೆ ಸಲ್ಲ : ಬಾನು ಮುಷ್ತಾಕ್​ 2023 ವೇದಿಕೆಯೊಂದರಲ್ಲಿ ಕನ್ನಡ ವಿರೋಧಿ ಹೇಳಿಕೆ ನೀಡಿದ್ದರು-. ಅದು ಮತ್ತೆ ಮೈಸೂರಿನಲ್ಲಿ ಮರುಕಳಿಸಬಾರದು ಎಂದು ಯದುವೀರ್​ ಹೇಳಿದರು.