ಬಾಳೆಹೊನ್ನೂರಿನಲ್ಲಿ ಇನ್ನರ್‌ವ್ಹೀಲ್ ಕ್ಲಬ್ 318ರ ಜಿಲ್ಲಾ ಘಟಕದ ಜಿಲ್ಲಾ ಅಧ್ಯಕ್ಷೆಯಾಗಿ ವೈಶಾಲಿ ಕುಡ್ವ ಪದಗ್ರಹಣ ಸ್ವೀಕರಿಸಿದರು. ಸುನೀತಾ ಜೈನ್, ರಾಜಲಕ್ಷ್ಮೀ ಶೆಟ್ಟಿ ಇದ್ದರು. 
ಜಿಲ್ಲೆ

ಹಳ್ಳಿಗಳಿಗೆ ಇನ್ನರ್‌ವ್ಹೀಲ್ ಸೇವೆ ದೊರೆಯಲಿ

ಎಸ್.ಎನ್.ರವೀಂದ್ರ

ಬಾಳೆಹೊನ್ನೂರು: ವಿಶ್ವದ ದೊಡ್ಡ ಮಹಿಳಾ ಸಂಘಟನೆ ಇನ್ನರ್‌ವ್ಹೀಲ್ ಸೇವೆ ಗ್ರಾಮೀಣ ಭಾಗಕ್ಕೂ ದೊರೆಯಬೇಕು ಎಂದು ಕ್ಲಬ್ ಅಸೋಸಿಯೇಟ್ ಅಧ್ಯಕ್ಷೆ ಸುನೀತಾ ಜೈನ್ ಹೇಳಿದರು.

ಇನ್ನರ್‌ವ್ಹೀಲ್ ಕ್ಲಬ್ 318ರ ಜಿಲ್ಲಾ ಘಟಕ ಇತ್ತೀಚೆಗೆ ಆಯೋಜಿಸಿದ್ದ ನೂತನ ಜಿಲ್ಲಾ ಅಧ್ಯಕ್ಷ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಮಹಿಳೆ ಸಂಸಾರ ನಿಭಾಯಿಸಿಕೊಂಡು ಸಂಸ್ಥೆ ಮೂಲಕ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶ್ಲಾಘನೀಯ. ಇನ್ನರ್‌ವ್ಹೀಲ್ ಸಂಸ್ಥೆಯಿಂದ ನಡೆಯುವ ಸಾಮಾಜಿಕ, ವೈದ್ಯಕೀಯ, ಆರ್ಥಿಕ ಸೇವೆಗಳು ಪ್ರತಿ ಹಳ್ಳಿಗೂ ತಲುಪಬೇಕಿದೆ ಎಂದರು.
ಸಂಸ್ಥೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರಿಂದ ಸ್ನೇಹ, ಸೌಹಾರ್ದ ಕಲಿಸಿಕೊಡುವುದರ ಜತೆಗೆ ಮಹಿಳೆಯರನ್ನು ಬಲಿಷ್ಠಗೊಳಿಸುತ್ತಿದೆ ಎಂದು ಹೇಳಿದರು.
ಜಿಲ್ಲಾ ಅಧ್ಯಕ್ಷೆ ವೈಶಾಲಿ ಕುಡ್ವ ಪದವಿ ಸ್ವೀಕರಿಸಿದರು. ರೋಟರಿ ಜಿಲ್ಲೆ 3182ರ ನೂತನ ಗವರ್ನರ್ ಸಿ.ಎ.ದೇವಾನಂದ, ಇನ್ನರ್‌ವ್ಹೀಲ್ ಕ್ಲಬ್ ಜಿಲ್ಲಾ ಸಮಿತಿಯ ರಾಜಲಕ್ಷ್ಮೀ ಶೆಟ್ಟಿ ಇತರರಿದ್ದರು.