ಶಾಂತಿಪುರ(ಹೆಬ್ಬಳ್ಳ) ಕ್ಕೆ ನಿರಂತರ ವಿದ್ಯುತ್ ಪೂರೈಕೆ ನೀಡುವಂತೆ ಆಗ್ರಹಿಸಿ ವಾರ್ಡ್ ನಿವಾಸಿಗಳು ಪುರಸಭೆ ಮುಖ್ಯಾಧಿಕಾರಿ ಪಿ.ಸುರೇಶ್ ಅವರಿಗೆ ಮನವಿ ಸಲ್ಲಿಸಿದರು. ಎ.ಮಹೇಶ್ವರ್, ಶಿವಮೂರ್ತಿ, ದೊಡ್ಡ ನಾಯಕ, ಮಂಜು, ಪ್ರಕಾಶ್, ರಾಜಣ್ಣ, ಅಂಕಪ್ಪ ಇತರರು ಇದ್ದರು. 
ಜಿಲ್ಲೆ

ಶಾಂತಿಪುರ ಗ್ರಾಮಕ್ಕೆ ನಿರಂತರವಾಗಿ ವಿದ್ಯುತ್ ಪೂರೈಕೆಯಾಗಲಿ


ಎಚ್.ಡಿ.ಕೋಟೆ: ಪಟ್ಟಣದ ವಾರ್ಡ್ ನಂ.22 ಶಾಂತಿಪುರ(ಹೆಬ್ಬಳ್ಳ) ಗ್ರಾಮಕ್ಕೆ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡುವಂತೆ ಆಗ್ರಹಿಸಿ ವಾರ್ಡ್ ನಿವಾಸಿಗಳು ಮಂಗಳವಾರ ಪುರಸಭೆ ಮುಖ್ಯಾಧಿಕಾರಿ ಪಿ.ಸುರೇಶ್ ಅವರಿಗೆ ಮನವಿ ಸಲ್ಲಿಸಿದರ.

ವಿದ್ಯುತ್ ಇಲ್ಲದೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ರಾತ್ರಿ ವೇಳೆ ವಿದ್ಯುತ್ ನಿಲುಗಡೆ ಮಾಡುತ್ತಿರುವುದರಿಂದ ಮಕ್ಕಳ ಓದಿಗೆ ಸಮಸ್ಯೆಯಾಗುತ್ತಿದೆ. ಗ್ರಾಮದಲ್ಲಿ ತಂಬಾಕು ಮಂಡಳಿ ಇರುವುದರಿಂದ ರೈತರು ಹಾಗೂ ವಾಹನಗಳ ಸಂಚಾರ ಹೆಚ್ಚಿರುತ್ತದೆ. ಅಲ್ಲದೆ ಯಾವುದೇ ಕೆಲಸ ಕಾರ್ಯಕ್ಕಾಗಿ ಪಟ್ಟಣಕ್ಕೆ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಮುಖ್ಯಾಧಿಕಾರಿ ಪಿ.ಸುರೇಶ್, ವಾರ್ಡ್‌ನಲ್ಲಿ ವಿದ್ಯುತ್ ಸಮಸ್ಯೆ ಇರುವುದು ನನ್ನ ಗಮನಕ್ಕೆ ಬಂದಿದ್ದು, ನಿರಂತರವಾಗಿ ಸಂಪರ್ಕ ನೀಡುವ ಸಂಬಂಧ ಖರ್ಚು ವೆಚ್ಚದ ಅಂದಾಜು ತಯಾರಿಸಲು ಸೂಚನೆ ನೀಡಲಾಗಿದೆ. ಈ ಬಗ್ಗೆ ಸೆಸ್ಕ್ ಅಧಿಕಾರಿಗಳ ಜತೆ ಚರ್ಚಿಸಿ ನಿರಂತರ ವಿದ್ಯುತ್ ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಗ್ರಾಮದಲ್ಲಿ ಹೈಮಾಸ್ಟ್ ದೀಪ ಅಳವಡಿಕೆ ಕಾರ್ಯ ನಡೆಯುತ್ತಿದ್ದು, ಶೀಘ್ರ ಸಂಪರ್ಕ ನೀಡಲಾಗುವುದು. ಜತೆಗೆ ಮೂಲಸೌಕರ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ನಿವಾಸಿಗಳಾದ ಎಂ.ಮಹೇಶ್ವರ್, ಶಿವಮೂರ್ತಿ, ಜವರೇಗೌಡ, ಮಂಜು(ಬೋಚ), ದೊಡ್ಡನಾಯಕ, ಕರಿಗೌಡ, ಪ್ರಕಾಶ್, ಅಂಕಪ್ಪ, ರಾಜಣ್ಣ, ರಾಜೇಂದ್ರ, ಮದನ್‌ಗೌಡ, ಶಿವು, ಪ್ರವೀಣ್, ನವೀನ್, ಮಂಜುನಾಥ್, ರಾಕಿ ಇತರರಿದ್ದರು.