ಮೂಡಿಗೆರೆ: ಹಾನಗಲ್ ಶ್ರೀ ಕುಮಾರ ಶಿವಯೋಗಿ ಸ್ವಾಮಿಗಳು ಸ್ಥಾಪಿಸಿದ ಮಹಾಸಭೆ ಮತ್ತು ಶಿವಯೋಗ ಮಂದಿರದಲ್ಲಿ ನೂರಾರು ಸ್ವಾಮೀಜಿಗಳಿಗೆ ವಿದ್ಯಾಭ್ಯಾಸ ನೀಡಲಾಗುತ್ತದೆ. ವಿದ್ಯೆ ಜತೆಗೆ ಸಂಗೀತ. ಸಾಹಿತ್ಯ. ಭಕ್ತಿ. ಧ್ಯಾನ. ಸಂಸ್ಕಾರದ ತರಬೇತಿ ನೀಡಲಾಗುತ್ತದೆ. ವೀರಶೈವ ಲಿಂಗಾಯತ ಸಮುದಾಯದ ಪ್ರತಿಯೊಬ್ಬರೂ ಸಂಘಟಿತರಾಗಿ ವೀರಶೈವ ಲಿಂಗಾಯತ ಸಮಾಜವನ್ನು ಇನ್ನೂ ಎತ್ತರಕ್ಕೆ ಬೆಳೆಸೋಣ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಕಾರ್ಯನಿರ್ವಾಹಕ ನಿರ್ದೇಶಕ ಚಿದಾನಂದ ಎಸ್. ಮಠದ್ ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕ ಹಾಗೂ ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಸೋಮವಾರ ಗೋಣಿಬೀಡಿನಲ್ಲಿ ನಡೆದ ಹಾನಗಲ್ ಶ್ರೀಶಿವಯೋಗಿಗಳ 158ನೇ ಜಯಂತಿ ಉತ್ಸವ ಹಾಗೂ ಉಪನ್ಯಾಸ ಜ್ಞಾನ ಪುಷ್ಪ ಕಾರ್ಯಕ್ರಮದಲ್ಲಿ ಮಾತನಾಡಿ, ವೀರಶೈವ ಲಿಂಗಾಯತ ಸಮುದಾಯಕ್ಕೆ ಬಹುದೊಡ್ಡ ಪರಂಪರೆಯಿದೆ. ದೇಶದ ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಅತಿದೊಡ್ಡ ಯಶಸ್ಸುಗಳಿಸಿರುವ ಈ ಸಮುದಾಯದ ಯುವಕರು ಮುನ್ನುಗ್ಗಿ ಸಮಾಜದಲ್ಲಿ ಸುಧಾರಣೆ ಕಾಣಬೇಕಾಗಿದೆ ಎಂದು ತಿಳಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಬಿ.ಎಸ್.ಓಂಕಾರ್, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ರಾಜಲಕ್ಷ್ಮಿ ಕಾಂತರಾಜ್, ರಾಜ್ಯ ಸಮಿತಿ ನಿರ್ದೇಶಕ ಎಂ.ಆರ್‌ಪೂರ್ಣೇಶ್ ಮೂರ್ತಿ, ತನುಜಾ ರಾಜೇಶ್, ಶಾಲಿನಿ ಅನಿಲ್, ಉಮಾ ಮೋಹನ್, ಎಂ.ಡಿ.ಇಂದ್ರೇಶ್, ಎನ್.ಪ್ರತಾಪ್, ರಾಜೇಶ್, ಮಗ್ಗಲಮಕ್ಕಿ ಗಣೇಶ್, ವಸಂತ್ ಹಾರ್ಗೋಡು, ಹೆಚ್.ಆರ್,ಕಾಂತರಾಜ್, ಮಹೇಶ್ವರಯ್ಯ, ಮೃತ್ಯುಂಜಯ, ಸಂಗಮೇಶ, ಶಕುಂತಲಾ ಪಾಟೀಲ್, ಎಂ.ಸಿ.ಆದರ್ಶ, ಪ್ರಮೋದ್ ಇತರರಿದ್ದರು.