ಸಿಂಧನೂರಿನಲ್ಲಿ ಡಾ.ಮಲ್ಲಿಕಾರ್ಜುನ ಕಮತಗಿ ಅವರ ‘ಬೆತ್ತಲೆ ಹರಕೆ’ ಕೃತಿಯನ್ನು ಶಾಸಕ ಹಂಪನಗೌಡ ಬಾದರ್ಲಿ ಬಿಡುಗಡೆಗೊಳಿಸಿದರು. ನೊಬೆಲ್ ಕಾಲೇಜ್ ಅಧ್ಯಕ್ಷ ಪರಶುರಾಮ ಮಲ್ಲಾಪುರ, ವಿಜಯಪುರದ ವಿಶ್ರಾಂತ ಪ್ರಾಧ್ಯಾಪಕ ಸಿದ್ದಣ್ಣ ಪಿ., ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಎಂ.ಶಿವಯ್ಯ, ನಿಜಶರಣ ಅಂಬಿಗರ ಚೌಡಯ್ಯ ನೌಕರರ ಸಂಘದ ಅಧ್ಯಕ್ಷ ಮಂಜುನಾಥ ಸೋಮಲಾಪುರ ಇತರರಿದ್ದರು. 
ಜಿಲ್ಲೆ

ಮೌಲ್ಯಯುತ ಕೃತಿಗಳು ಹೊರಬರಲಿ

Kopala - Desk - Eraveni

ಸಿಂಧನೂರು: ಯುವ ಬರಹಗಾರರು ತಮ್ಮ ಕೃತಿಗಳಲ್ಲಿ ಜೀವನ ಮೌಲ್ಯಗಳಿಗೆ ಆದ್ಯತೆ ನೀಡಬೇಕು ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನೊಬೆಲ್ ಪ್ರಕಾಶನದಿಂದ ಭಾನುವಾರ ಡಾ.ಮಲ್ಲಿಕಾರ್ಜುನ ಕಮತಗಿ ಅವರ ದ್ವಿತೀಯ ಕೃತಿ ‘ಬೆತ್ತಲೆ ಹರಕೆ’ ಬಿಡುಗಡೆಗೊಳಿಸಿ ಮಾತನಾಡಿದರು. ಇತ್ತೀಚೆಗೆ ಯುವ ಬರಹಗಾರರ ಸಂಖ್ಯೆ ಹೆಚ್ಚುತ್ತಿರುವುದು ಒಳ್ಳೆಯ ಬೆಳವಣಿಗೆ.

ಉತ್ತಮ ಕೃತಿಗಳನ್ನು ರಚಿಸುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ರವಾನಿಸಬೇಕು. ಮಾನವೀಯ ಮೌಲ್ಯಗಳ ಉಳಿವಿಗೆ ಜಾಗೃತಿ ಮೂಡಿಸುವ ಕೆಲಸ ಬರಹಗಳಿಂದಾಗಬೇಕು. ಸಹಕಾರಿ ಇಲಾಖೆಯಲ್ಲಿ ಕೆಲಸ ಮಾಡುವ ಡಾ.ಮಲ್ಲಿಕಾರ್ಜುನ ಕಮತರ ಅವರ ಎರಡನೇ ಕೃತಿ ಎಲ್ಲರ ಮೆಚ್ಚುಗೆ ಗಳಿಸಲಿ ಎಂದು ಶುಭ ಹಾರೈಸಿದರು.

ಕಾರಟಗಿಯ ಪ್ರಾಧ್ಯಾಪಕ ಡಾ.ಹನುಮಂತಪ್ಪ ಚಂದಲಾಪುರ ಕೃತಿ ಪರಿಚಯ ಮಾಡಿದರು. ನೊಬೆಲ್ ಕಾಲೇಜ್ ಅಧ್ಯಕ್ಷ ಪರಶುರಾಮ ಮಲ್ಲಾಪುರ, ವಿಜಯಪುರದ ವಿಶ್ರಾಂತ ಪ್ರಾಧ್ಯಾಪಕ ಸಿದ್ದಣ್ಣ ಪಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಪ್ರಾಚಾರ್ಯ ಎಂ.ಶಿವಯ್ಯ,

ನಿಜಶರಣ ಅಂಬಿಗರ ಚೌಡಯ್ಯ ನೌಕರರ ಸಂಘದ ಅಧ್ಯಕ್ಷ ಮಂಜುನಾಥ ಸೋಮಲಾಪುರ, ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಎಚ್.ಕಂಬಳಿ, ಉಪನ್ಯಾಸಕಿ ಚನ್ನಬಸಮ್ಮ ಪರಶುರಾಮ ಮಲ್ಲಾಪುರ, ಪ್ರಮುಖರಾದ ಸುರಪುರ ಹೊಳೆಪ್ಪ ಕಮತಗಿ, ಶರಣಬಸಪ್ಪ ಯಾಳವರ, ಶೇಖ್‌ಹುಸೇನ, ಕರಿಬಸವ ಎಸ್.ಗಿರಡ್ಡಿ ಇತರರಿದ್ದರು.