ಮುದ್ದೇಬಿಹಾಳ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಸಂಗೀತಾ ನಾಡಗೌಡ ಮಾತನಾಡಿದರು. 
ಜಿಲ್ಲೆ

ಅಸಂಟಿತ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯ ಸಿಗಲಿ

ಗಿರೀಶ ಸಗರ

ಮುದ್ದೇಬಿಹಾಳ: ಕಾರ್ಮಿಕರ ಪ್ರಮುಖ ಧ್ವನಿಯಾಗಿರುವ ಭಾರತದ ಅತಿದೊಡ್ಡ ಕಾರ್ಮಿಕ ಸಂಟನೆ ನ್ಯಾಷನಲ್​ ಟ್ರೇಡ್​ ಯೂನಿಯನ್​ ಕಾಂಗ್ರೆಸ್​ನ ವ್ಯಾಪ್ತಿಯಲ್ಲಿರುವ ಭಾರತೀಯ ರಾಷ್ಟ್ರೀಯ ಕಟ್ಟಡ ನಿರ್ಮಾಣ, ಅರಣ್ಯ ಮತ್ತು ಮರದ ಕಾರ್ಮಿಕರ ಒಕ್ಕೂಟ (ಐಎನ್​ಬಿಸಿಡಬ್ಲುಎ್​) ಅಸಂಟಿತ ಕಾರ್ಮಿಕರಿಗೋಸ್ಕರ ಕೆಲಸ ಮಾಡುತ್ತಿದೆ ಎಂದು ಐಎನ್​ಬಿಸಿಡಬ್ಲುಎ್​ನ ಮಹಿಳಾ ಟಕದ ನೂತನ ರಾಜ್ಯಾಧ್ಯೆ ಸಂಗೀತಾ ನಾಡಗೌಡ ಹೇಳಿದರು.

ಇಲ್ಲಿನ ಹುಡ್ಕೋ ನಿವಾಸದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಕ್ಕೂಟದ ಕಾರ್ಯಚಟುವಟಿಕೆ ಮಾಹಿತಿ ನೀಡಿದ ಅವರು, ರಾಜ್ಯಾದ್ಯಂತ ಅಸಂಟಿತ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳು ಸುಲಭವಾಗಿ ದೊರೆಯುವಂತೆ ನೋಡಿಕೊಳ್ಳುವ ಹೊಣೆಗಾರಿಕೆ ನಿಭಾಯಿಸುತ್ತಿದೆ. ಜಿಲ್ಲೆ, ತಾಲೂಕು ವ್ಯಾಪ್ತಿಯಲ್ಲಿರುವ ಕಾರ್ಮಿಕ ಇಲಾಖೆಯಲ್ಲಿ ಅಸಂಟಿತ ಕಾರ್ಮಿಕರ ನೋಂದಣಿ, ಸೌಲಭ್ಯ, ಅಗತ್ಯ ನೆರವು ಸೇರಿ ಹಲವು ಮಹತ್ವದ ಅಂಶಗಳ ಮೇಲುಸ್ತುವಾರಿ ನೋಡಿಕೊಳ್ಳುವ ಈ ವಿಭಾಗಕ್ಕೆ ಸಾಕಷ್ಟು ಮಹತ್ವ ಇದೆ ಎಂದರು.

ಅಸಂಟಿತ ವಲಯದ ಮಹಿಳಾ ಕಾರ್ಮಿಕರು ತಮಗಾದ ಅನ್ಯಾಯ, ನೋವಿಗೆ ನೊಂದುಕೊಂಡು ಮರ್ಯಾದೆಗೆ ಹೆದರಿ ಮನೆಯಲ್ಲಿ ಕೂಡದೆ ನಮ್ಮ ೆಡರೇಷನ್​ ಗಮನಕ್ಕೆ ತಂದಲ್ಲಿ ಸೂಕ್ತ ನ್ಯಾಯ ಒದಗಿಸಿಕೊಡಲಾಗುತ್ತದೆ. ರಾಜ್ಯಾದ್ಯಂತ ಈ ೆಡರೇಷನ್​ಗೆ ಜಿಲ್ಲಾಧ್ಯರು, ತಾಲೂಕು ಅಧ್ಯರು ಇದ್ದಾರೆ. ಇಲ್ಲದ ಕಡೆ ಶ್ರೀ ನೇಮಕ ಮಾಡಲಾಗುತ್ತದೆ. ಮಹಿಳಾ ಕಾರ್ಮಿಕರು ತಮ್ಮ ಹೆಸರನ್ನು ಕಾರ್ಮಿಕ ಇಲಾಖೆಯಲ್ಲಿ ಅಗತ್ಯ ದಾಖಲೆ ಸಲ್ಲಿಸಿ ನೋಂದಣಿ ಮಾಡಿಕೊಳ್ಳಬೇಕು ಎಂದರು.

ನಮ್ಮ ದುಡಿಮೆಗೆ ತಕ್ಕ ಪ್ರತಿಲ ಸಿಗುವ ಹಾಗೆ ೆಡರೇಷನ್​ನಲ್ಲಿ ಗುರುತಿಸಿಕೊಂಡವರಿಗೂ ಪ್ರತಿಲ ಸಿಗುತ್ತದೆ. ಅನ್ಯಾಯ, ಶೋಷಣೆ, ದೌರ್ಜನ್ಯ ಮುಂತಾದವುಗಳನ್ನು ತಡೆಗಟ್ಟಲು ಒಕ್ಕೂಟವು ಕಾರ್ಯತತ್ಪರವಾಗಿದೆ. ವಲಸೆ ಕಾರ್ಮಿಕರಿಗೆ ಮತದಾನದ ಹಕ್ಕು ಕೊಡಿಸಲು ನೆರವಾಗುತ್ತದೆ ಎಂದರು.