ಶಿರಹಟ್ಟಿ: ಶಿಕ್ಷಕರು ಅಧ್ಯಯನ ಪ್ರವೃತ್ತಿ ಮೈಗೂಡಿಸಿಕೊಂಡು ತಮ್ಮಲ್ಲಿನ ಜ್ಞಾನ ಮಕ್ಕಳಿಗೆ ಧಾರೆ ಎರೆದಾಗ ಮಾತ್ರ ಶಿಕ್ಷಕ ವೃತ್ತಿಗೆ ಬೆಲೆ ಬರುತ್ತದೆ ಎಂದು ಪಪಂ ಮಾಜಿ ಅಧ್ಯಕ್ಷ ಎಚ್.ಡಿ. ಮಾಗಡಿ ಹೇಳಿದರು.
ಸ್ಥಳೀಯ ಎ.ಎ. ಪಠಾಣ ಸರ್ಕಾರಿ ಉರ್ದು ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಎಂ.ಐ. ಕಿಲ್ಲೇದಾರ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಶಿರಹಟ್ಟಿ ಮುಸ್ಲಿಂ ಸಮಾಜದಿಂದ ಭಾನುವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಮೌಲಾನಾ ಮಜಹರಖಾನ ಪಠಾಣ ಮಾತನಾಡಿ, ಶಿಕ್ಷಕರು ಗುರುವಿನ ಸ್ಥಾನದ ಪಾವಿತ್ರೃ ಕಾಪಾಡಿಕೊಂಡು ಸರಳ, ಸಜ್ಜನಿಕೆಯ ವ್ಯಕ್ತಿತ್ವದೊಂದಿಗೆ ಮಕ್ಕಳಿಗೆ ಮಾದರಿಯಾಗಿ ಗುಣಮಟ್ಟದ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡಿದಾಗ ಮಕ್ಕಳು ಉತ್ತಮ ಪ್ರಜೆಗಳಾಗುತ್ತಾರೆ. ಎಷ್ಟು ವರ್ಷ ಶಿಕ್ಷಕ ವೃತ್ತಿ ಮಾಡಿದೆ ಎಂಬುದಕ್ಕಿಂತ ಹೇಗೆ ಮಾಡಿದೆ ಎಂಬುದು ಮುಖ್ಯ. ಮುಖ್ಯೋಪಾಧ್ಯಾಯ ಎಂ.ಐ. ಕಿಲ್ಲೇದಾರ ಅವರು ಸಲ್ಲಿಸಿದ ಸೇವೆ ಸಾರ್ಥಕವಾಗಿದೆ ಎಂದರು. ಸನ್ಮಾನ ಸ್ವೀಕರಿಸಿ ಎಂ.ಐ. ಕಿಲ್ಲೇದಾರ ಮಾತನಾಡಿದರು.