ದೇವರಹಿಪ್ಪರಗಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ವಿಜಯಪುರ ಅನುಗ್ರಹ ಆಸ್ಪತ್ರೆ ಮುಖ್ಯಸ್ಥ ಡಾ.ಪ್ರಭುಗೌಡ ಲಿಂಗದಳ್ಳಿ(ಚಬನೂರ) ಬಿಡುಗಡೆ ಮಾಡಿದರು. ಸಿ.ಕೆ. ಕುದರಿ, ರಿಯಾಜ್ ಯಲಗಾರ, ಬಶೀರ್ ಅಹ್ಮದ್ ಬೇಪಾರಿ, ಎ.ಎಚ್. ವಾಲೀಕಾರ ಇತರರಿದ್ದಾರೆ. 
ಜಿಲ್ಲೆ

ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಮಾದರಿಯಾಗಲಿ

ದೇವರಹಿಪ್ಪರಗಿ: ಡಿಸೆಂಬರ್ 27ರಂದು ಆಯೋಜಿಸಿರುವ ದೇವರಹಿಪ್ಪರಗಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾದರಿ ಸಮ್ಮೇಳನವನ್ನಾಗಿ ವಿಜೃಂಭಣೆಯಿಂದ ಆಚರಿಸೋಣ ಎಂದು ವಿಜಯಪುರದ ಅನುಗ್ರಹ ಆಸ್ಪತ್ರೆಯ ಮುಖ್ಯಸ್ಥ ಡಾ. ಪ್ರಭುಗೌಡರ ಲಿಂಗದಳ್ಳಿ (ಚಬನೂರ)ಹೇಳಿದರು.

ಶಾಸಕರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಅವರು, ನಾವೆಲ್ಲರೂ ಸಮ್ಮೇಳನದ ಯಶಸ್ಸಿಗೆ ಶ್ರಮಿಸೋಣ ಎಂದರು.

ನಿವೃತ್ತ ನೌಕರರ ಸಂಘದ ತಾಲೂಕಾಧ್ಯಕ್ಷ ಸಿ.ಕೆ. ಕುದರಿ ಮಾತನಾಡಿ ಸಮ್ಮೇಳನದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸೋಣ ಹಾಗೂ ಅರ್ಥಪೂರ್ಣವಾಗಿ ಗೋಷ್ಠಿಗಳನ್ನು ಹಮ್ಮಿಕೊಳ್ಳೋಣ ಎಂದರು.

ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ರಿಯಾಜ್ ಯಲಗಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಶೀರ್ ಅಹ್ಮದ್ ಬೇಪಾರಿ, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎ.ಎಚ್. ವಾಲೀಕಾರ, ಕಸಾಪ ತಾಲ್ಲೂಕಾಧ್ಯಕ್ಷ ಜಿ.ಪಿ. ಅರುಣ ಕೋರವಾರ ಮಾತನಾಡಿದರು.

ಕಾಶೀನಾಥ ಸಾಲಕ್ಕಿ, ಸಂಗಪ್ಪ ತಡವಲ, ಬಸವರಾಜ ತಾಳಿಕೋಟಿ, ಸಿ.ಬಿ. ಅಸ್ಕಿ, ಸಂಗನಗೌಡ ಬಿರಾದಾರ, ಕಾಶೀನಾಥ ಕೋರಿ, ಪಿ.ಎಸ್. ಮಿಂಚನಾಳ, ರಾವುತ್ ತಳಕೇರಿ, ಯಶವಂತ ರಾವ್, ಕಾಶೀನಾಥ ತಳಕೇರಿ, ಶಿವರಾಜ ತಳವಾರ, ಪ್ರಕಾಶ ಮಲ್ಹಾರಿ, ಮುನೀರ್ ಅಹ್ಮದ್ ಮಳಖೇಡ, ಎಸ್.ಎಸ್. ಸಾತಿಹಾಳ, ಶ್ರೀಕಾಂತ ರಾಠೋಡ, ಪಿ.ಸಿ. ತಳಕೇರಿ, ಮುರ್ತುಜಾ ತಾಂಬೋಳಿ, ರಾಘವೇಂದ್ರ ಗುಡಿಮನಿ, ಸಿದ್ದು ಮೇಲಿನಮನಿ, ಗೋಲ್ಲಾಳ ಬಿರಾದಾರ, ಸುರೇಶ ಬಡಿಗೇರ, ಕೆ.ಎಮ್. ನಂದಿ, ರವಿ ಕೊಟೀನ ಮತ್ತಿತರರಿದ್ದರು.