ಕುಲಗೋಡ: ಬಸವಜ್ಯೋತಿ ವಿದ್ಯಾ ವರ್ಧಕ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಜ್ಞಾನ ಜ್ಯೋತಿಗಳಾಗಿ ಬೆಳಗಬೇಕು. ಜತೆಗೆ ಒಳ್ಳೆಯ ಸಂಸ್ಕೃತಿ, ಆಚಾರ-ವಿಚಾರ, ಸಮಯಪ್ರಜ್ಞೆ, ಸತತ ಪ್ರಯತ್ನ, ಏಕಾಗ್ರತೆ ಹೊಂದಿರಬೇಕು ಎಂದು ಹಾರೂಗೇರಿಯ ಶ್ರೀ ಸಿದ್ದೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಟಿ.ಎಸ್.ವಂಟಗೂಡಿ ಹೇಳಿದರು.
ಮೂಡಲಗಿ ತಾಲೂಕಿನ ಹುಣಶ್ಯಾಳ (ಪಿ.ವೈ) ಗ್ರಾಮದ ಶ್ರೀ ಬಸವಜ್ಯೋತಿ ವಿದ್ಯಾ ವರ್ಧಕ ಶಿಕ್ಷಣ ಸಂಸ್ಥೆಯ ಮಾತೃಭೂಮಿ ಕಲಾ ಮತ್ತು ವಾಣಿಜ್ಯ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎ.ಡಿ.ಗೌಡನ್ನವರ ಮಾತನಾಡಿದರು. ಶಿಕ್ಷಕರಾದ ಈರಣ್ಣ ಕಾಗವಾಡ, ಮಲ್ಲು ಕಾಂಬಳೆ, ಹುಣಶ್ಯಾಳ ಪಿ.ವೈ., ಡಿ.ಪಿ.ದಾಸಣ್ಣವರ, ಗೌರಮ್ಮ ಗೌಡನವರ, ಸಂಸ್ಥೆ ಸದಸ್ಯ ಹನುಮಂತ ಗೌಡನ್ನವರ, ಕಾರ್ಯದರ್ಶಿ ಬೋರಮ್ಮ ಗೌಡನ್ನವರ ಇತರರಿದ್ದರು. ಪ್ರಾಚಾರ್ಯ ವಿ.ಆರ್.ಬಾಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾವತಿ ಕಿಲಾರಿ ಸ್ವಾಗತಿಸಿದರು. ಭಾಗ್ಯಶ್ರೀ ಮಾನೆ ನಿರೂಪಿಸಿದರು. ಕುಸುಮಾ ದೇಸಾಯಿ ವಂದಿಸಿದರು.