ಇಂಡಿ: ರೈತ ಒಂದು ವರ್ಷ ದುಡಿದರೆ ಭವಿಷ್ಯದ ವರ್ಷಕ್ಕೆ ಸಾಕಾಗುವಷ್ಟು ಆಹಾರ ಸಂಗ್ರಹಿಸುತ್ತಾನೆ. ಆದರೆ, ವಿದ್ಯಾರ್ಥಿಗಳು ಕಷ್ಟಪಟ್ಟು ಅಧ್ಯಯನ ಮಾಡಿದರೆ ಇಡೀ ಜಿವನಪರ್ಯಂತ ಸಾಕಾಗುವಷ್ಟು ಜ್ಞಾನವೆಂಬ ಆಹಾರ ಸಂಗ್ರಹಿಸಬಹುದು ಎಂದು ನಿವೃತ್ತ ಪ್ರಾಚಾರ್ಯ ಎ.ಪಿ. ಕಾಗವಾಡ ಹೇಳಿದರು.
ತಾಲೂಕಿನ ಲಚ್ಯಾಣ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ತಾರುಣ್ಯದಲ್ಲಿ ಕಷ್ಟಪಟ್ಟು ದುಡಿದರೆ ವೃದ್ಧಾಪ್ಯದಲ್ಲಿ ಅದೇ ಲವಾಗಿ ನೆಮ್ಮದಿ ನೀಡುತ್ತದೆ ಎಂದು ತಿಳಿಸಿದರು.
ಎಂ.ಎಂ. ಮುಜಗೊಂಡ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡಿದರೆ ಮಾತ್ರ ವಿದ್ಯಾರ್ಥಿಗಳ ಅತ್ಯುತ್ತಮ ಭವಿಷ್ಯಗೊಳ್ಳಲು ಸಾಧ್ಯ ಎಂದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಲಾಯಿತು.
ಗ್ರಾಪಂ ಸದಸ್ಯ ಸುರೇಶ ವಾಲಿ, ಗಣ್ಯರಾದ ಸಂಕಪಗೌಡ ಬಿರಾದಾರ, ಅರವಿಂದ ಕರಾಳೆ, ಈರಣ್ಣ ಕಾರಕಲ್, ರಾಜೇಸಾಬ ನದಾಫ್, ಪ್ರಾಚಾರ್ಯೆ ಮೀನಾಕ್ಷಿ ವಾಗ್ದಾಳೆ ಇತರರಿದ್ದರು.