ಹುಬ್ಬಳ್ಳಿ : ವಿದ್ಯಾರ್ಥಿಗಳು ಕೌಶಲ್ಯ ಆಧಾರಿತ ಶಿಕ್ಷಣ ಪಡೆಯಬೇಕು ಎಂದು ದ ಲೆಕ್ಕಪರಿಶೋಧಕ ನಟರಾಜ ಮುಶಿಳ್ಳಿ ಸಲಹೆ ನೀಡಿದರು.
ಇಲ್ಲಿನ ಚೇತನ ವಾಣಿಜ್ಯ ಬಿಬಿಎ ಮತ್ತು ಬಿಸಿಎ ಮಹಾವಿದ್ಯಾಲಯದಲ್ಲಿ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳ ‘ಆಗಮನ 2024‘ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.
ಕೌಶಲ್ಯವು ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗ ಮತ್ತು ಸ್ವ ಉದೊ್ಯೕಗದ ಅವಕಾಶಗಳನ್ನು ಸೃಷ್ಟಿಸಲು ಪ್ರಮುಖ ಪಾತ್ರವಹಿಸುತ್ತದೆ, ಈ ಜಾಗತೀಕರಣದ ಯುಗದಲ್ಲಿ ಕೌಶಲ್ಯಗಳ ಅಗತ್ಯತೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದರು.
ವಿದ್ಯಾರ್ಥಿಗಳು ಕೌಶಲ್ಯ ಆಧಾರಿತ ಶಿಕ್ಷಣ ಪಡೆದು, ತಮ್ಮ ಭವಿಷ್ಯವನ್ನು ಸುಸ್ಥಿರಗೊಳಿಸಬೇಕು. ಕೌಶಲ್ಯವೇ ಈಗಿನ ದಿನದಲ್ಲಿ ಉತ್ತಮ ಉದೊ್ಯೕಗ ಮತ್ತು ಸ್ವ ಉದೊ್ಯೕಗದ ನಾಂದಿ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ವಿಶ್ವನಾಥ ಕೊರವಿ ಮಾತನಾಡಿ, ಚೇತನ ಸಮೂಹ ಸಂಸ್ಥೆಗಳು ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಅಪಾರ ಕೊಡುಗೆ ನೀಡುತ್ತ ಬಂದಿವೆ ಎಂದು ತಿಳಿಸಿದರು.
ಪ್ರಾಚಾರ್ಯ ಡಾ. ಎ. ಆರ್. ವಡಕಣ್ಣವರ್, ಶೈಕ್ಷಣಿಕ ಸಲಹೆಗಾರ ಡಾ. ಕೆ. ಸಿ. ಪಾಂಗಿ, ಬಿಕಾಂ ವಿಭಾಗದ ಮುಖ್ಯಸ್ಥ ಡಾ. ಪ್ರಶಾಂತ ಗಾಮನಗಟ್ಟಿ, ಬಿಸಿಎ ವಿಭಾಗದ ಮುಖ್ಯಸ್ಥೆ ಡಾ. ಶಿಲ್ಪಾ ಜಡಿಮಠ, ಪಿಯುಸಿ ವಿಭಾಗದ ಮುಖ್ಯಸ್ಥೆ ಪ್ರೊ. ನಿಧಿ ದೇಶಪಾಂಡೆ ಹಾಗೂ ಇತರರು ಉಪಸ್ಥಿತರಿದ್ದರು.
ಪ್ರೊ. ಭಾಗ್ಯಶ್ರೀ ಬಳಿಗಾರ ನಿರೂಪಿಸಿದರು. ಪ್ರೊ. ವೀಣಾ ಕುಂಶಿ ವಂದಿಸಿದರು.