ಜಿಲ್ಲೆ

ವಿದ್ಯಾರ್ಥಿಗಳು ಮಾನವೀಯ ವೌಲ್ಯ ಮೈಗೂಡಿಸಿಕೊಳ್ಳಲಿ


ಬೆಳಗಾವಿ: ವಿದ್ಯಾರ್ಥಿಗಳು ಜ್ಞಾನಾರ್ಜನೆ ಜತೆಗೆ ಮಾನವಿಯ ವೌಲ್ಯಗಳನ್ನು ಮೈಗೂಡಿಸಿಕೊಂಡು ಒಳ್ಳೆಯ ಸಮಾಜ ನಿರ್ಮಿಸಲು ಶ್ರಮಿಸಬೇಕು. ಅಂದಾಗ ಶಿಕ್ಷಣದ ಗುರಿ ಈಡೇರಲು ಸಾಧ್ಯ ಎಂದು ಪ್ರಾಚಾರ್ಯ ಕೆ.ಬಿ.ಕೋರಿ ಹೇಳಿದರು.

ಸವದತ್ತಿಯ ಕುಮಾರೇಶ್ವರ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭವನ್ನು ಎಸ್.ಕೆ.ಇ.ಎಸ್ ಚೇರ್ಮನ್ ಸದಾಶಿವ ಕೌಜಲಗಿ ಹಾಗೂ ಕೆ. ಎ.ಬಳಿಗಾರ ಉದ್ಘಾಟಿಸಿದರು. ಕೆ.ಬಿ.ಕೋರಿ, ಸಿ.ಜಿ.ಸವಟಗಿ, ಬಿ.ಎಂ.ಹೂಲಿಕಟ್ಟಿ, ಬಸವರಾಜ ಅಕ್ಕಿ , ಜಿ.ಎಸ್.ಶಿಂಧೆ,  ಜೆ.ಎಸ್.ಸುಳ್ಳದ ಇದ್ದರು.


ಜಿಲ್ಲೆಯ ಸವದತ್ತಿ ಪಟ್ಟಣದ ಕುಮಾರೇಶ್ವರ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಜ್ಞಾನ ಗಳಿಸುವ ಮೂಲಕ ಮಾಹಿತಿ ತಂತ್ರಜ್ಞ್ಞಾನ ಬಳಸಿಕೊಂಡು, ಜಾಗತಿಕ ಸ್ಪರ್ಧೆಯಲ್ಲಿ ಯಶ ಗಳಿಸಬೇಕು. ಹಾಗಂತ ಅಂಕಗಳಿಕೆಗೆ ಸೀಮಿತರಾಗದೆ ಸಂಸ್ಕಾರವನ್ನೂ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಿರಹಟ್ಟಿಯ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎ.ಬಳಿಗಾರ ಮಾತನಾಡಿ, ವಿದ್ಯಾರ್ಥಿಗಳು ದೊರೆತ ಅವಕಾಶವನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡು ವ್ಯಕ್ತಿತ್ವವನ್ನು ವಿಕಾಸ ಮಾಡಿಕೊಳ್ಳಬೇಕು. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಉತ್ಸಾಹಶಾಲಿಗಳಾಗಿ ಭಾಗವಹಿಸಬೇಕು ಎಂದರು.

2022-23ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎಸ್.ಕೆ.ಇ.ಎಸ್ ಚೇರ್ಮನ್ ಸದಾಶಿವ ಕೌಜಲಗಿ ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ಸಿ.ಜಿ.ಸವಟಗಿ, ನಿರ್ದೇಶಕ ಬಿ.ಎಂ.ಹೂಲಿಕಟ್ಟಿ, ಬಸವರಾಜ ಅಕ್ಕಿ , ಜಿ.ಎಸ್.ಶಿಂಧೆ,  ಜೆ.ಎಸ್.ಸುಳ್ಳದ ಸೇರಿದಂತೆ ಇತರರಿದ್ದರು. ಡಾ.ಪಿ.ವೈ.ಯಾಕೊಳ್ಳಿ ಸ್ವಾಗತಿಸಿದರು. ಎಚ್.ಬಿ.ಭಜಂತ್ರಿ ವಂದಿಸಿದರು. ಎಸ್.ಪಿ.ಬೀಳಗಿ ಹಾಗೂ ಬಿ.ವೈ.ಮಡಿವಾಳರ ನಿರೂಪಿಸಿದರು.