ಗೋಣಿಕೊಪ್ಪ : ಕಾವೇರಿ ಕಾಲೇಜು ಗೋಣಿಕೊಪ್ಪಲು ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಬಸವೇಶ್ವರ ಗಿರಿಜನರ ಕಾಲನಿಯಲ್ಲಿ ಬುಧವಾರ ಸ್ವಚ್ಛತಾ ಹೈ ಸೇವಾ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮಕ್ಕೆ ಹಾಡಿ ಮುಖಂಡ ವೈ.ಎಸ್.ಗಪ್ಪು ಚಾಲನೆ ನೀಡಿದರು. ಕಾವೇರಿ ಕಾಲೇಜು ವಿದ್ಯಾರ್ಥಿಗಳು ಹಾಡಿಯ ಮನೆ ಮನೆಗಳಿಗೆ ತೆರಳಿ ಆರ್ಥಿಕ ಸಮೀಕ್ಷೆ ನಡೆದರು. ನಂತರ ಹಾಡಿಯ ಆವರಣದಲ್ಲಿ ಸ್ವಚ್ಛತಾ ಕಾರ್ಯ ಮಾಡಿದರಲ್ಲದೆ ಗಿಡ ನೆಟ್ಟು ಸಂಭ್ರಮಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ ಘಟಕ ಅಧ್ಯಕ್ಷ ಪೆಮ್ಮಂಡ ಮಂಜು ಬೋಪಣ್ಣ ಮಾತನಾಡಿ, ವಿದ್ಯಾರ್ಥಿಗಳು ಸಮಾಜಸೇವೆಯಲ್ಲಿ ತೊಡಗಿಕೊಂಡರೇ ಮಾತ್ರ ಮೇಲು ಕೀಳು ಎಂಬ ಅಂತರ ಕಡಿಮೆಯಾಗಿ ಎಲ್ಲರೂ ಸಮಾನರಂತೆ ಬಾಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಇದಕ್ಕೂ ಮೊದಲು ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ.ಬಿ.ಕಾವೇರಿಯಪ್ಪ ಧ್ವಜಾರೋಹಣ ನಡೆಸಿದರು. ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿ ಎನ್.ಪಿ. ರೀತಾ, ಸಲಹಾ ಸಮಿತಿ ಸದಸ್ಯರು ಹಾಗೂ ಉಪನ್ಯಾಸಕರಾದ ಪೂಜಾ ಮತ್ತು ಸಂತೋಷ್, ಗ್ರಂಥಾಲಯ ಸಹಾಯಕ ಚನ್ನನಾಯಕ, ಶಿಬಿರಾರ್ಥಿಗಳು ಇದ್ದರು.