ಲೋಕಾಪುರದ ಬಸವೇಶ್ವರ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳು ಮುಧೋಳದ ತಾಲೂಕು ನ್ಯಾಯಾಲಯಕ್ಕೆ ತೆರಳಿ ಕಾರ್ಯ ಕಲಾಪಗಳನ್ನು ವೀಕ್ಷಿಸಿದರು. 
ಜಿಲ್ಲೆ

ವಿದ್ಯಾರ್ಥಿಗಳು ಹೊರಗಿನ ವ್ಯವಸ್ಥೆ ಅನುಭವಿಸಲಿ

ಗಿರೀಶ ಸಗರ

ಲೋಕಾಪುರ: ಪಟ್ಟಣದ ಬಸವೇಶ್ವರ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳು ಮುಧೋಳದ ನ್ಯಾಯಾಲಯಕ್ಕೆ ಭೇಟಿ ನೀಡಿ ಕಾರ್ಯ ಕಲಾಪ ವೀಕ್ಷಿಸಿದರು.

ಪ್ರಾಚಾರ್ಯ ಪರಶುರಾಮ ವನಸಿ ಮಾತನಾಡಿ,ಗುಣಮಟ್ಟದ ಶಿಕ್ಷಣ ಎಂಬುದು ಕೇವಲ ಬಾಯಿ ಮಾತಿನಲ್ಲಿ ಹೇಳಿದರೆ ಸಾಲದು,ಕಾರ್ಯರೂಪಕ್ಕೂ ಬರಬೇಕು.

ಮಕ್ಕಳು ತರಗತಿ ಕೋಣೆ ಬಿಟ್ಟು ಸ್ವತಃ ಹೊರಗಿನ ವ್ಯವಸ್ಥೆ ಅನುಭವಿಸಿದಾಗ ಮಾತ್ರ ಪಠ್ಯಗಳನ್ನು ಅತಿ ಹೆಚ್ಚು ಸಮಯ ನೆನಪಿನಲ್ಲಿಡಲು ಸಹಕಾರಿ ಆಗುತ್ತದೆ ಎಂದರು.

ಸಮಾಜ ವಿಜ್ಞಾನ ಶಿಕ್ಷಕ ಬಸವರಾಜ ಕಗಲಗೊಂಬ ಮಾತನಾಡಿ,ತಾಲೂಕು ನ್ಯಾಯಾಲಯಕ್ಕೆ ಮುಂಚಿತವಾಗಿ ಶಾಲೆ ವತಿಯಿಂದ ಪತ್ರ ಬರೆದು ನ್ಯಾಯಾಧೀಶರ ಒಪ್ಪಿಗೆ ಪಡೆದು ವಿದ್ಯಾರ್ಥಿಗಳು ಕಲಾಪ ವೀಕ್ಷಿಸುವಂತೆ ಮಾಡಲಾಗಿದೆ.

ನ್ಯಾಯಾಲಯ ವೀಕ್ಷಣೆಗಾಗಿ ಮುಂಚಿತವಾಗಿ ಮಕ್ಕಳಿಗೆ ಪಾಠದ ಜತೆಗೆ ಅದರ ಅನುಭವ ಮೂಡಿಸಲು ಇಂತಹ ಚಟುವಟಿಕೆ ಹೆಚ್ಚು ಸಹಕಾರಿಯಾಗುತ್ತವೆ ಎಂದರು.

ಶಿಕ್ಷಕಿಯರಾದ ವಿಜಯಲಕ್ಷ್ಮೀ ವನಸಿ,ಗೀತಾ ಎಸ್. ಲಕ್ಷ್ಮೀ ಎಸ್. ಪ್ರಿಯಾ ಕೆ.ಇದ್ದರು.