ಭಾರತೀಯ ವಿದ್ಯಾರ್ಥಿ ಸಂಘದಿಂದ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ, ಪಿಯು, ಪದವಿಯಲ್ಲಿ ಹೆಚ್ಚು ಅಂಕ ಗಳಿಸಿದ ಎಸ್ಸಿ, ಎಸ್ಟಿ ಒಬಿಸಿ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಡಾ.ಶಿವಕುಮಾರ್, ಎಚ್.ಬಿ.ರಾಜು, ಎ.ಆರ್.ಅಶೋಕ್, ರಾಜೇಗೌಡ ಇತರರು ಇದ್ದರು. 
ಜಿಲ್ಲೆ

ವಿದ್ಯಾರ್ಥಿಗಳು ಹೆಚ್ಚಿನ ಜ್ಞಾನ ಸಂಪಾದಿಸಲಿ

ಲೋಕೇಶ್ ಮನು. ಡಿ

ಬೇಲೂರು: ಜ್ಞಾನಕ್ಕಿಂತ ದೊಡ್ಡ ಶಕ್ತಿ ಇಲ್ಲ. ಹೆಚ್ಚಿನ ಜ್ಞಾನ ಹೊಂದಿದ್ದರೆ ಪ್ರಪಂಚವನ್ನೇ ಗೆಲ್ಲಬಹುದು ಎಂಬುದನ್ನು ಡಾ.ಅಂಬೇಡ್ಕರ್ ತೋರಿಸಿ ಕೊಟ್ಟಿದ್ದಾರೆ. ಅವರಂತೆ ವಿದ್ಯಾರ್ಥಿಗಳು ಜ್ಞಾನ ಸಂಪಾದಿಸಿ ಸಾಧನೆ ಮಾಡಬೇಕು ಎಂದು ಬೆಂಗಳೂರಿನ ಅಕ್ಕ ಐಎಎಸ್ ಅಕಾಡೆಮಿ ಸಂಸ್ಥಾಪಕ ಹಾಗೂ ಕನ್ನಡ ಐಚ್ಛಿಕ ವಿಷಯ ತರಬೇತುದಾರ ಡಾ.ಶಿವಕುಮಾರ್ ಹೇಳಿದರು.


ಪಟ್ಟಣದ ಶ್ರೀ ಶಿವಕುಮಾರ ಸ್ವಾಮೀಜಿ ಕಲ್ಯಾಣ ಮಂಟಪದಲ್ಲಿ ಭಾರತೀಯ ವಿದ್ಯಾರ್ಥಿ ಸಂಘದಿಂದ ಮಂಗಳವಾರ ಆಯೋಜಿಸಿದ್ದ 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ, ಪಿಯು, ಪದವಿಯಲ್ಲಿ ಹೆಚ್ಚು ಅಂಕ ಗಳಿಸಿದ ಎಸ್ಸಿ, ಎಸ್ಟಿ, ಒಬಿಸಿ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದರು.
ಗೌತಮ ಬುದ್ಧರ ಕಾಲದಿಂದಲೂ ಜೀವನ ಎಂದರೆ ಏನು ಎಂದು ಸಾವಿರಾರು ಜನರು ಹೇಳಿದ್ದಾರೆ. ಆದರೆ ಸಮಯವೇ ಜೀವನ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ದಿನದ 24 ಗಂಟೆಯಲ್ಲಿ ಉಳಿಯುವ 5 ರಿಂದ 6 ಗಂಟೆ ಸಮಯವನ್ನು ವ್ಯರ್ಥ ಮಾಡಿದರೆ ಜೀವನ ಪೂರ್ತಿ ಪರಿತಪಿಸಬೇಕಾಗುತ್ತದೆ. ಡಾ.ಅಂಬೇಡ್ಕರ್ ಅವರು ಲಂಡನ್‌ನಲ್ಲಿ ವಿದ್ಯಾಭ್ಯಾಸ ಮಾಡುವಾಗ ದಿನದಲ್ಲಿ 8 ರಿಂದ 10 ಗಂಟೆ ಅಭ್ಯಾಸ ಮಾಡುತಿದ್ದರು. ಇಂದಿನ ವಿದ್ಯಾರ್ಥಿಗಳಿಗೆ ಅವರೇ ಮಾಡಲ್. ವಿದ್ಯಾರ್ಥಿಗಳು ಪ್ರಮುಖವಾಗಿ ಎಸ್‌ಎಸ್‌ಎಲ್‌ಸಿ, ಪಿಯು, ಪದವಿ ನಂತರ ಏನು ಮಾಡಬೇಕು, ನಿಮ್ಮ ಮುಂದಿನ ಗುರಿ, ಸಾಧನೆ ಏನು ಎಂಬುದನ್ನು ಮೊದಲೇ ನಿರ್ಧರಿಸಿ ನಿಮಗೆ ಯಾವುದರಲ್ಲಿ ಆಸಕ್ತಿ ಇದೆಯೋ ಆ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು. ಪಾಲಕರು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಮಾತನಾಡಿದರು. ಸಮಾರಂಭದ ಸಾನ್ನಿಧ್ಯವನ್ನು ಚಾಮರಾಜನಗರದ ನಳಂದ ಬೌದ್ಧ ವಿಶ್ವ ವಿದ್ಯಾನಿಲಯದ ಕಾರ್ಯದರ್ಶಿ ಹಾಗೂ ತಾಲೂಕಿನ ಗಾಂಧಾರ ಬುದ್ಧ ವಿಹಾರದ ಸಧ್ಯಕ್ಷ ಭಂತೇ ಬೋಧಿದತ್ತ ಮಹಾಥೇರ ವಹಿಸಿದ್ದರು.

ಬಿವಿಎಸ್ ತಾಲೂಕು ಅಧ್ಯಕ್ಷ ಎಚ್.ಬಿ.ರಾಜು, ಪ್ಲಾೃನಿಂಗ್ ಆಫೀಸರ್ ಮಹೇಶ್ ನಾಯ್ಕ, ಬಿಆರ್‌ಸಿ ಶಿವಮರಿಯಪ್ಪ, ಹಳೇಬೀಡು ಕರ್ನಾಟಕ ಪಬ್ಲಿಕ್ ಶಾಲೆ ಉಪಪ್ರಾಂಶುಪಾಲ ಮುಳ್ಳಯ್ಯ, ವಕೀಲರ ಸಂಘದ ಜಿಲ್ಲಾ ಉಪಾಧ್ಯಕ್ಷ ಯೋಗೀಶ್, ಪತ್ರಕರ್ತರ ಸಂಘದ ಅಧ್ಯಕ್ಷೆ ಭಾರತೀಗೌಡ, ಚಲವಾದಿ ಮಹಾಸಭಾ ಅಧ್ಯಕ್ಷ ಮಂಜುನಾಥ್, ಚಿಕಮಗಳೂರು ವಕೀಲರ ಸಂಘದ ಪ್ರ.ಕಾರ್ಯದರ್ಶಿ ಅನಿಲ್, ಮುಖಂಡರಾದ ರವಿ, ಲಕ್ಷ್ಮಣ್, ಬಿಎಸ್‌ಜಿ ಸ್ವಾಮಿ, ಯೋಗೇಶ್, ನಿಂಗರಾಜು ಇತರರಿದ್ದರು.