ಬನ್ನೂರಿನ ಸಮೀಪದ ಕುಳ್ಳನಕೊಪ್ಪಲು ಗ್ರಾಮದ ಆರೋಹಣ ಸೆಂಟ್ರಲ್ ಸ್ಕೂಲ್‌ನಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಕ್ರೀಡಾ ಸಾಧಕ ಮಕ್ಕಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಎಂ.ಎಂ.ಸುರೇಶ್‌ಚಂಗಪ್ಪ, ಎಸ್.ಸಿ.ಶಿವಮೂರ್ತಿ, ವೈ.ಎಚ್.ಹನುಮಂತೇಗೌಡ, ಎನ್.ಎಂ.ರಾಮಚಂದ್ರ, ಬಿ.ಎನ್.ಸುರೇಶ್, ರೂಪಾ, ವಿಮಲಾ, ಮಾಣಿಕ್‌ಚಂದ್‌ಚೌಧರಿ, ಬಿ.ಎಸ್.ಯೋಗೇಂದ್ರ ಇದ್ದರು.  
ಜಿಲ್ಲೆ

ವಿದ್ಯಾರ್ಥಿಗಳು ಉತ್ತಮ ವಿಚಾರ ಮೈಗೂಡಿಸಿಕೊಳ್ಳಲಿ

ಅಭಿನಯ್ ಎಚ್.ಎಂ

ಬನ್ನೂರು: ಶಿಕ್ಷಣಕ್ಕೆ ಮಹತ್ವ ನೀಡುವ ಮೂಲಕ ಪ್ರತಿಯೊಬ್ಬರೂ ಕಲಿಕೆ ಸಮಯದಲ್ಲಿ ಉತ್ತಮ ವಿಚಾರ ಮೈಗೂಡಿಸಿಕೊಂಡರೆ ಉತ್ತಮ ಪ್ರಜೆಯಾಗಲು ಸಾಧ್ಯ ಎಂದು ರೋಟರಿ ಜಿಲ್ಲಾ ಪ್ರಾಂತಪಾಲ ಎಂ.ಎಂ.ಸುರೇಶ್‌ಚಂಗಪ್ಪ ತಿಳಿಸಿದರು.

ಪಟ್ಟಣದ ಸಮೀಪದ ಕುಳ್ಳನಕೊಪ್ಪಲು ಗ್ರಾಮದ ಆರೋಹಣ ಸೆಂಟ್ರಲ್ ಸ್ಕೂಲ್‌ನಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಯಾಗುತ್ತಿದ್ದು, ಅದಕ್ಕೆ ತಕ್ಕಂತೆ ಮಕ್ಕಳು ಹೊಂದಿಕೊಳ್ಳುವ ಮೂಲಕ ಸ್ಪರ್ಧಾತ್ಮಕ ಯುಗದಲ್ಲಿ ಬೆಳೆಯಬೇಕಾದರೆ ಅವರಿಗೆ ಬಾಲ್ಯದಿಂದಲೇ ಉತ್ತಮವಾದ ಶಿಕ್ಷಣ ಅಗತ್ಯ ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ.ಶಿವಮೂರ್ತಿ ಮಾತನಾಡಿ, ಪಾಲಕರು ಮಕ್ಕಳನ್ನು ಶಾಲೆಗೆ ಸೇರಿಸುವುದರ ಜತೆಗೆ ಅವರ ಪಾತ್ರದ ಬಗ್ಗೆಯೂ ನಿಗಾ ವಹಿಸಬೇಕು ಎಂದು ಹೇಳಿದರು.

ನಂತರ ಗಣ್ಯರು ಶಾಲಾ ದಿನದರ್ಶಿಕೆ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿದರು. ಆರೋಹಣ ಶಾಲೆ ಅಧ್ಯಕ್ಷ ವೈ.ಎಚ್.ಹನುಮಂತೇಗೌಡ, ಕಾರ್ಯದರ್ಶಿ ಎನ್.ಎಂ.ರಾಮಚಂದ್ರ, ಬಿ.ಎನ್.ಸುರೇಶ್, ಮುಖ್ಯ ಶಿಕ್ಷಕಿಯರಾದ ರೂಪಾ, ವಿಮಲಾ, ಮಾಣಿಕ್‌ಚಂದ್‌ಚೌಧರಿ, ಬಿ.ಎಸ್.ಯೋಗೇಂದ್ರ, ಎ.ಆರ್.ಅರವಿಂದ್, ಬಿ.ಕೆ.ವೆಂಕಟೇಶ್‌ಪ್ರಸಾದ್, ಬಿ.ಕೆ. ದೀಪಕ್‌ಕುಮಾರ್‌ಜೈನ್, ಟಿ.ವಾಸುದೇವ, ಎಸ್.ಬಸವೇಗೌಡ, ರಾಕೇಶ್‌ಕುಮಾರ್, ಸುಭಾಷ್‌ಚೌಧರಿ, ಸುರಜ್, ವೆಂಕಟೇಶ್, ಪೂಜಾ ಉಪಸ್ಥಿತರಿದ್ದರು.