ಜಿಲ್ಲೆ

ಲೈಂಗಿಕ ಅಲ್ಪ ಸಂಖ್ಯಾತರಿಗೆ ಎಲ್ಲಾ ರಂಗದಲ್ಲೂ ಅವಕಾಶ ದೊರಕಲಿ

ಪ್ರಸಿನ್ ಕೆ.ಆರ್

ಮೈಸೂರು: ಎಲ್ಲಾ ರಂಗದಲ್ಲೂ ಲೈಂಗಿಕ ಅಲ್ಪ ಸಂಖ್ಯಾತರಿಗೆ ಅವಕಾಶ ದೊರಕುವಂತಾಗಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಅಕೈ ಪದ್ಮಶಾಲಿ ಹೇಳಿದರು.

ನಗರದ ಜೆಕೆ ಮೈದಾನದಲ್ಲಿ ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿಯಿಂದ ಮಂಗಳವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಲೈಂಗಿಕ ಅಲ್ಪ ಸಂಖ್ಯಾತರು ಸಮಾಜದಲ್ಲಿ ಶಿಕ್ಷಣ, ಘನತೆಯ ಬದುಕು, ಸಾಮಾಜಿಕವಾಗಿ ಬೆರೆಯುವುದರಿಂದ ವಂಚಿತರಾಗುತ್ತಿದ್ದೇವೆ ಸರ್ಕಾರ ನಮಗೂ ಗೌರವಯುತ ಬದುಕು ನಡೆಸಲು ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮೀ, ಶಕ್ತಿ ಯೋಜನೆಗಳ ಮೂಲಕ ಸಮುದಾಯಕ್ಕೆ ನೆರವಾಗಿದೆ. 2017ರಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಅನುಕೂಲ್ಕಕೆ ಕಾಯ್ದೆ ಜಾರಿಗೊಳಿಸಿದ ನಂತರ ಅನುಕೂಲವಾಗಿದೆ. ಶೋಷಣೆ ಅನುಭವಿಸಿದವರಿಗೆ ಅದರ ನೋವಿನ ಅರಿವಾಗುತ್ತದೆ. ಯಾರಿಗೆ ಕೂಡ ಸಾಮಾಜಿಕ ಬಹಿಷ್ಕಾರದಂತಹ ಶಿಕ್ಷೆ ನೀಡಬಾರದು ಎಂದು ಹೇಳಿದರು. ತೃತೀಯಲಿಂಗಿ ರಕ್ಷಿತಾ ನೃತ್ಯದ ಮೂಲಕ ಎಲ್ಲರನ್ನು ರಂಜಿಸಿದರು.