ಯಲಬುರ್ಗಾ ಬಿಜೆಪಿ ಹಾಗೂ ಜೆಡಿಎಸ್ ತಾಲೂಕು ಘಟಕದಿಂದ ಕುಕನೂರು ಗುದ್ನೇಪ್ಪನಮಠದ ನವೋದಯ ವಿದ್ಯಾಲಯ ರಸ್ತೆಯಲ್ಲಿ ಪ್ರತಿಭಟನೆ ನಡೆಸಲಾಯಿತು. ಬಿಜೆಪಿ ಮಂಡಲ ಅಧ್ಯಕ್ಷ ಮಾರುತಿ ಗಾವರಾಳ, ಜೆಡಿಎಸ್ ವಕ್ತಾರ ಮಲ್ಲನಗೌಡ ಕೋನನಗೌಡ್ರು, ಬನ್ನಿಕೊಪ್ಪ ಗ್ರಾಪಂ ಅಧ್ಯಕ್ಷ ನಾಗರಾಜ ವೆಂಕಟಾಪುರ, ಪ್ರಮುಖರಾದ ಅನಿಲ್ ಆಚಾರ್, ಮಹಾಂತೇಶ ಹೂಗಾರ ಇತರರಿದ್ದರು. 
ಜಿಲ್ಲೆ

ಕ್ಷೇತ್ರದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಿ

ರುದ್ರಪ್ಪ ವಾಲಿ

ಕುಕನೂರು: ಕ್ಷೇತ್ರದಲ್ಲಿನ ರಸ್ತೆಗಳ ಗುಂಡಿಗಳನ್ನು ಮುಚ್ಚಿ, ಜನರ ಜೀವ ಉಳಿಸುವಂತೆ ಆಗ್ರಹಿಸಿ ಯಲಬುರ್ಗಾ ಮಂಡಲ ಬಿಜೆಪಿ ಹಾಗೂ ಜೆಡಿಎಸ್‌ನಿಂದ ಪಟ್ಟಣದ ಗುದ್ನೇಪ್ಪನಮಠದ ನವೋದಯ ವಿದ್ಯಾಲಯ ರಸ್ತೆಯಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ಮಾರುತಿ ಗಾವರಾಳ ಮಾತನಾಡಿ, ಶಾಸಕ ಬಸವರಾಜ ರಾಯರಡ್ಡಿ ಅವರು ಮೊದಲು ಕ್ಷೇತ್ರದಲ್ಲಿ ಬಿದ್ದಿರುವ ರಸ್ತೆಗಳ ಗುಂಡಿಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳಬೇಕು. ಮಾಜಿ ಸಚಿವ ಹಾಲಪ್ಪ ಆಚಾರ ಅವರು ಮಂಜೂರು ಮಾಡಿಸಿದ 18 ಎಕರೆ ಜಮೀನು ರದ್ದು ಮಾಡಿ, ಗುದ್ನೇಪ್ಪನಮಠದ ಜಾಗವನ್ನು ಕಬಳಿಕೆಗೆ ಮುಂದಾಗಿದ್ದಾರೆ. ಇದರಿಂದ ದನಕರುಗಳಿಗೆ ತೊಂದರೆಯಾಗುತ್ತಿದೆ. ಸಣ್ಣ ಕೆಲಸ ಕೇಳಿದರೂ ರಾಯರಡ್ಡಿ ಅವರು ಕೋಟಿ ಲೆಕ್ಕದಲ್ಲಿ ಮಾತನಾಡುತ್ತಾರೆ. ಕ್ಷೇತ್ರದಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲಾಗುತ್ತಿಲ್ಲ. ಬರಿ ಸುಳ್ಳು, ನಾಟಕ ಮಾಡಿಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ದೂರಿದರು.

ಜೆಡಿಎಸ್ ವಕ್ತಾರ ಮಲ್ಲನಗೌಡ ಕೋನನಗೌಡ್ರು, ಬನ್ನಿಕೊಪ್ಪ ಗ್ರಾಪಂ ಅಧ್ಯಕ್ಷ ನಾಗರಾಜ ವೆಂಕಟಾಪುರ ಮಾತನಾಡಿದರು.

ಪ್ರಮುಖರಾದ ಅನಿಲ್ ಆಚಾರ್, ಮಹಾಂತೇಶ ಹೂಗಾರ, ಅಮರೇಶ ಹುಬ್ಬಳ್ಳಿ, ಮಂಜುನಾಥ ನಾಡಗೌಡ, ಕರಬಸಯ್ಯ ಬಿನ್ನಾಳ, ಸಿದ್ಲಿಂಗಯ್ಯ ಬಂಡಿ, ಶಿವರಾಜಗೌಡ ಯಲ್ಲಪ್ಪಗೌಡ್ರ, ಸಿದ್ಲಿಂಗಯ್ಯ ಉಳ್ಳಾಗಡ್ಡಿ, ಜಗನ್ನಾಥ ಭೋವಿ, ಕನಕಪ್ಪ ಬ್ಯಾಡರ್, ಪ್ರಕಾಶ್ ತಹಸೀಲ್ದಾರ್, ದ್ಯಾಮಣ್ಣ ಉಚ್ಚಲಕುಂಟ, ವೀರೇಶ ಸಬರದ ಇತರರಿದ್ದರು.