ಮಸ್ಕಿಯಲ್ಲಿ ಏರ್ಪಡಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಜೆಎಂಎಫ್‌ಸಿ ನ್ಯಾಯಾಧೀಶೆ ರೂಪಾ ಶ್ರೀವಗ್ಗಾ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ವೀರಭದ್ರಪ್ಪ, ಈಶಪ್ಪ ದೇಸಾಯಿ, ರಾಮಪ್ಪ ಬಳಗಾನೂರು, ರಾಮಣ್ಣ ದೀನಸಮುದ್ರ, ಶಿವರಾಜ ಕಣ್ಣೂರು, ಮಲ್ಲಪ್ಪ ನಾಗರಬೆಂಚಿ, ಮಾರುತಿ ಕಲ್ಲೂರು, ಅಮರೇಗೌಡ ವಕೀಲರು, ಡಾ.ಬಸಲಿಂಗಪ್ಪ ದಿವಟರ್ ಇತರರಿದ್ದರು. 
ಜಿಲ್ಲೆ

ಹಕ್ಕು-ಕರ್ತವ್ಯಗಳನ್ನು ಪಾಲನೆ ಮಾಡಲಿ

ರುದ್ರಪ್ಪ ವಾಲಿ

ಮಸ್ಕಿ: ಭಾರತದ ಸಂವಿಧಾನ ಮತ್ತು ಕಾನೂನು ಬಲಿಷ್ಠವಾಗಿದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಇಲ್ಲಿನ ಜೆಎಂಎಫ್‌ಸಿ ನ್ಯಾಯಾಧೀಶೆ ರೂಪಾ ಶ್ರೀವಗ್ಗಾ ಹೇಳಿದರು.

ಪಟ್ಟಣದ ಶ್ರೀ ಭ್ರಮರಾಂಬ ದೇವಸ್ಥಾನದಲ್ಲಿ ಶುಕ್ರವಾರ ಕಾನೂನು ಸೇವಾ ಸಮಿತಿ ಸಿಂಧನೂರು ಮತ್ತು ಮಸ್ಕಿ ನ್ಯಾಯವಾದಿಗಳ ಸಂಘದಿಂದ ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂವಿಧಾನದಡಿ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ನೀಡಲಾಗಿದೆ. ಅವುಗಳನ್ನು ಪಾಲನೆ ಮಾಡಿದರೆ ಸಮಸ್ಯೆಗಳು ಉದ್ಭವಿಸುವುದಿಲ್ಲ. ದೈನಂದಿನ ಬದುಕಿಗೆ ಬೇಕಾಗುವ ಕಾನೂನಿನ ಅರಿವು ಎಲ್ಲರೂ ತಿಳಿದುಕೊಳ್ಳುವುದು ಮುಖ್ಯವಾಗಿದೆ ಎಂದರು.