ಹುನಗುಂದದ ವಿಎಂಎಸ್‌ಆರ್ ವಸ್ತ್ರದ ಕಲಾ, ವಿಜ್ಞಾನ ಹಾಗೂ ವಿ.ಎಸ್. ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ತಿಪ್ಪೇಸ್ವಾಮಿ ಡಿ.ಎಸ್. ಅವರ ಮೂರು ಸಂಶೋಧನಾ ಗ್ರಂಥಗಳನ್ನು ಚಿತ್ತರಗಿಯ ಗುರುಮಹಾಂತ ಸ್ವಾಮಿಗಳು, ಶಿರೂರಿನ ಬಸವಲಿಂಗ ಸ್ವಾಮಿಗಳು ಬಿಡುಗಡೆಗೊಳಿಸಿದರು. ಡಾ. ಮಹಾಂತೇಶ ಕಡಪಟ್ಟಿ ಇತರರಿದ್ದರು. 
ಜಿಲ್ಲೆ

ಆಧುನಿಕ ಜಗತ್ತಿಗೆ ಸತ್ಯ ಸಾರುವ ಸಂಶೋಧನೆಗಳು ಹೊರಬರಲಿ

ಹುನಗುಂದ: ನಾವು ಕೈಗೊಳ್ಳುವ ಸಂಶೋಧನೆಗಳು ಆಧುನಿಕ ಜಗತ್ತಿಗೆ ಸತ್ಯ ಸಾರುವಂತಹವು ಆಗಬೇಕೆಂದು ನಿವೃತ್ತ ಪ್ರಾಧ್ಯಾಪಕ ಮಹೇಶ ತಿಪ್ಪಶೆಟ್ಟಿ ಹೇಳಿದರು.

ಪಟ್ಟಣದ ವಿಎಂಎಸ್‌ಆರ್ ವಸ್ತ್ರದ ಕಲಾ, ವಿಜ್ಞಾನ ಹಾಗೂ ವಿ.ಎಸ್. ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಡಾ. ತಿಪ್ಪೇಸ್ವಾಮಿ ಡಿ.ಎಸ್. ವಿರಚಿತ ಮೂರು ಸಂಶೋಧನಾ ಗ್ರಂಥಗಳ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಸತ್ಯ ಕಟುವಾಗಿದ್ದರೂ ದೊರೆಯುತ್ತಿರುವ ಗಟ್ಟಿ ಆಕರಗಳನ್ನು ಬಳಸಿಕೊಂಡು ಸತ್ಯವನ್ನು ಸಾಕ್ಷೀಕರಿಸುವ ಸಂಶೋಧನೆಗಳು ಆಗಬೇಕು ಎಂದು ಹೇಳುತ್ತ ಹುನಗುಂದ ತಾಲೂಕಿನ ಜನಪದ ವೈದ್ಯರು ಎಂಬ ಗ್ರಂಥಾವಲೋಕನ ಮಾಡಿದರು. ಹಳ್ಳಿ ಸೊಗಡಿನ ಔಷಧಗಳಿಗೆ ಯಾವುದೇ ಜಾಹೀರಾತುಗಳಿಲ್ಲವಾದರೂ ಅವು ಇಂದಿಗೂ ತಮ್ಮ ಮಹತ್ವ ಉಳಿಸಿಕೊಂಡು ಬರುತ್ತಿವೆ ಎಂದರು.

ಸಂಘದ ಗೌರವ ಕಾರ್ಯದರ್ಶಿ ಡಾ. ಮಹಾಂತೇಶ ಕಡಪಟ್ಟಿ ಮಾತನಾಡಿ, ಶಿಕ್ಷಕರು ತಮ್ಮ ವೃತ್ತಿ ಗೌರವಿಸುವ ಜತೆಗೆ ಸಂಶೋಧನೆಯಲ್ಲೂ ತಮ್ಮನ್ನು ತೊಡಗಿಸಿಕೊಳ್ಳಬೇಕು. ನಿರಂತರ ಅಧ್ಯಯನದ ಮೂಲಕ ವೃತ್ತಿ ಗೌರವ ಕಾಪಾಡಿಕೊಂಡು ಬರಬೇಕು ಎಂದರು.

ಸಾಹಿತಿ ಸದಾಶಿವ ಮರ್ಜಿ ಬಹುಮುಖಿ ಸಾಹಿತ್ಯ ಮತ್ತು ಸಂಸ್ಕೃತಿ ಕೃತಿ ಅವಲೋಕಿಸಿದರು.

ನಿವೃತ್ತ ಪ್ರಾಧ್ಯಾಪಕ ರಾಜಶೇಖರ ಬಸುಪಟ್ಟದ ಹುಡುಕಿದ ಹೊನ್ನು ಕೃತಿ ಪರಿಚಯಿಸಿದರು.

ಲೇಖಕ ತಿಪ್ಪೇಸ್ವಾಮಿ ಡಿ.ಎಸ್. ಮಾತನಾಡಿದರು.

ಇಳಕಲ್ಲದ ಗುರುಮಹಾಂತ ಸ್ವಾಮೀಜಿ, ಶಿರೂರಿನ ಬಸವಲಿಂಗ ಸಾನ್ನಿಧ್ಯ ವಹಿಸಿ ಕೃತಿಗಳ ಲೋಕಾರ್ಪಣೆಗೊಳಿಸಿದರು. ಪ್ರಾಚಾರ್ಯೆ ಎಸ್.ಕೆ. ಮಠ ಸ್ವಾಗತಿಸಿದರು.

ಪ್ರಾಧ್ಯಾಪಕ ಎಂ.ಬಿ. ಒಂಟಿ ಅತಿಥಿಗಳನ್ನು ಪರಿಚಯಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲಿಕಾರ್ಜುನ ಸಜ್ಜನ ವಂದಿಸಿದರು. ಪ್ರಾಧ್ಯಾಪಕ

*