ಜಿಲ್ಲೆ

ವನ್ಯಜೀವಿಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಲಿ

ಎಚ್.ಡಿ.ಕೋಟೆ: ವನ್ಯಜೀವಿಗಳು ನಮ್ಮ ನಿಸರ್ಗದ ಕೊಡುಗೆಯಾಗಿದ್ದು, ಅವುಗಳನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಲಿ ಎಂದು ಐಪಿಎಸ್ ಅಧಿಕಾರಿ ಡಾ.ಪಿ.ಎಸ್.ಹರ್ಷ ತಿಳಿಸಿದರು.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಎಚ್.ಡಿ.ಕೋಟೆ ತಾಲೂಕಿನ ಅಂತರಸಂತೆ ವನ್ಯಜೀವಿ ವಲಯದ ಕಾಕನಕೋಟೆ ಸಫಾರಿ ಕೇಂದ್ರದಲ್ಲಿ ಗುರುವಾರ ‘ವಾನವ ವನ್ಯಜೀವಿ ಸಹಬಾಳ್ವೆ’ ಘೋಷವಾಕ್ಯದಡಿ ಆಯೋಜಿಸಿದ್ದ 71ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮದ ಸವಾರೋಪ ಸವಾರಂಭದಲ್ಲಿ ವಾತನಾಡಿದರು.

ಅರಣ್ಯವನ್ನು ರಕ್ಷಿಸಿಕೊಳ್ಳುವುದು ನಮ್ಮೆಲ್ಲರ ಹೊಣೆ. ಹೀಗಾಗಿ ನಾವು ಅರಣ್ಯಕ್ಕೆ ಪ್ಲಾಸ್ಟಿಕ್ ಬೀಸಾಡುವುದನ್ನು ಮೊದಲು ಬಿಡಬೇಕು. ವನ್ಯಜೀವಿಗಳು ಅತ್ಯಂತ ಸೂಕ್ಷ್ಮ ಸ್ವಭಾವವನ್ನು ಹೊಂದಿದ್ದು, ಶಬ್ದ ವಾಲಿನ್ಯ ವಾಡುವ ಮೂಲಕ ಅವುಗಳಿಗೆ ಕಿರಿಕಿರಿ ವಾಡಬಾರದು. ಕಾಡಿನಲ್ಲಿ ಪ್ರಾಣಿಗಳೇ ಮುಖ್ಯ. ಅವುಗಳ ರಕ್ಷಣೆ ಮೊದಲ ಆದ್ಯತೆಯಾಗಲಿ ಎಂದರು.

ಎಸಿಎಫ್ ಮಧು ವಾತನಾಡಿ, ನಾವೆಲ್ಲರೂ ಕಾಡಿನ ರಕ್ಷಣೆಯ ಜವಾಬ್ದಾರಿ ಹೊರಬೇಕು. ನಮ್ಮ ಇಲಾಖೆಯ ಅರಣ್ಯಾಧಿಕಾರಿ ಸಿದ್ದರಾಜು ಅವರಿಗೆ ಮುಖ್ಯಮಂತ್ರಿ ಚಿನ್ನದ ಪದಕ ಸಿಕ್ಕಿರುವುದು ನಮ್ಮ ಇಲಾಖೆಗೆ ತಂದ ಗೌರವ. ಅವರಂತೆಯೇ ಎಲ್ಲರೂ ಅರಣ್ಯ ಮತ್ತು ವನ್ಯಜೀವಿಗಳ ರಕ್ಷಣೆಗೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಬಳಿಕ ವಾತನಾಡಿದ ವಲಯ ಅರಣ್ಯಾಧಿಕಾರಿ ಎಸ್.ಎಸ್.ಸಿದ್ದರಾಜು, ಅರಣ್ಯ ಇಲಾಖೆಯೊಂದಿಗೆ ಸ್ಥಳೀಯರ ಸಹಕಾರವಿದ್ದಾಗ ಅರಣ್ಯ ಸಂರಕ್ಷಣೆ ಸಾಧ್ಯ. ಇದಕ್ಕೆ ಎಲ್ಲರ ಸಹಕಾರ ಮುಖ್ಯ. ನಾವು ಅರಣ್ಯದ ಒಳಗೆ ಪ್ರಾಣಿಗಳನ್ನು ಸಂರಕ್ಷಣೆ ವಾಡುವ ಜತೆಗೆ ಕಾಡಿನಿಂದ ಹೊರಬರುವ ಪ್ರಾಣಿಗಳು ಮತ್ತು ಕಾಡಂಚಿನ ಜನರ ರಕ್ಷಣೆಯನ್ನೂ ವಾಡಬೇಕು. ನಾನು ಬಾವಿಗೆ ಇಳಿದು ಚಿರತೆ ರಕ್ಷಣೆ ವಾಡಿದ್ದನ್ನು ಗುರುತಿಸಿ ಪದಕ ನೀಡಿದ್ದಾರೆ. ಇದು ನಮ್ಮ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ನಮ್ಮೆಲ್ಲ ಸಿಬ್ಬಂದಿಯ ಸಹಕಾರದಿಂದ ದೊರಕಿದ್ದು, ಈ ಪದಕ ಅವರಿಗೆ ಅರ್ಪಣೆ ಎಂದು ಹೇಳಿದರು.

ಇದೇ ವೇಳೆ ಅರಣ್ಯ ಸಂರಕ್ಷಣೆ ಕುರಿತು ಕಲಾವಿದ ಸುದರ್ಶನ್ ಹೆಗ್ಗಡೆ ಮತ್ತು ತಂಡದಿಂದ ಕಿರುನಾಟಕ ಪ್ರದರ್ಶಿಸಲಾಯಿತು. ಬಳಿಕ ಇಲಾಖೆಯಲ್ಲಿ 1994 ಮತ್ತು ಅದಕ್ಕಿಂತ ಹಿಂದಿನಿಂದಲೂ ಸೇವೆ ಸಲ್ಲಿಸಿದ ಹಿರಿಯ ಸಿಬ್ಬಂದಿಯಹನ್ನು ಗೌರವಿಸಲಾಯಿತು. ಹಾಗೂ ಹುಲಿಗಳ ಕುರಿತು ಸಂಶೋಧನೆಯಲ್ಲಿರುವ ಐಪಿಎಸ್ ಅಧಿಕಾರಿ ಡಾ.ಪಿ.ಎಸ್. ಹರ್ಷ ಹಾಗೂ ಕಿರುನಾಟಕ ಪ್ರದರ್ಶಿಸಿದ ಕಲಾವಿದರನ್ನು ಅಭಿನಂದಿಸಿ ಗೌರವಿಸಲಾಯಿತು.

ಇದೇ ವೇಳೆ ಆರ್‌ಎಫ್‌ಒಗಳಾದ ಹನುಮಂತರಾಜು, ರಶ್ಮೀ, ಡಿಆರ್‌ಎಫ್‌ಒಗಳು ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪ್ರವಾಸಿಗರು ಇದ್ದರು.