ಯಲ್ಲಾಪುರ: ಓದಿನ ಪ್ರವೃತ್ತಿ ಕ್ಷೀಣಿಸುತ್ತಿರುವ ಕಾಲಘಟ್ಟದಲ್ಲಿ ಕಾವ್ಯ ಚುಟುಕಾಗಿ ಚುರುಕಾಗಿ ಬಹುಬೇಗ ಜನರನ್ನು ತಲುಪುವಂತೆ ಆಗಬೇಕು ಎಂದು ನಿವೃತ್ತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ ಹೇಳಿದರು.
ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾವ್ಯ ಕಲರವ ಕಾರ್ಯಕ್ರಮದಲ್ಲಿ ಅವರು ಆಶಯ ನುಡಿಗಳನ್ನಾಡಿದರು. ಕವಿ ಕೇವಲ ಅಂತಮುಖಿಯಾಗದೇ ಸಮಾಜಮುಖಿಯಾಗುವ ಪ್ರಯತ್ನ ಮಾಡಬೇಕು ಎಂದರು.
ಕಸಾಪ ತಾಲೂಕು ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ಅಧ್ಯಕ್ಷತೆ ವಹಿಸಿದ್ದರು. ನಾಟಕಕಾರ ಟಿ.ವಿ. ಕೋಮಾರ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಂಘದ ಅಧ್ಯಕ್ಷ ಕೆ.ಎಸ್. ಭಟ್ಟ ಆನಗೋಡ, ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಜಿ.ಎನ್. ಭಟ್ಟ ತಟ್ಟಿಗದ್ದೆ, ಪತ್ರಕರ್ತ ಜಯರಾಜ ಗೋವಿ ಭಾಗವಹಿಸಿದ್ದರು.
ಕವಿಗಳಾದ ಸುಬ್ರಾಯ ಬಿದ್ರೆಮನೆ, ಶಿವಲೀಲಾ ಹುಣಸಗಿ, ಮುಕ್ತಾ ಶಂಕರ, ಪ್ರತಿಮಾ ಕೋಮಾರ, ಸುನಂದಾ ಪಾಟಣಕರ, ಮಧುಕೇಶ್ವರ ಭಾಗ್ವತ, ವಿಶ್ವೇಶ್ವರ ಗಾಂವ್ಕರ, ಕೃಷ್ಣ ಭಟ್ಟ ನಾಯಕನಕೆರೆ, ಮೋಹನಗೌಡ ಹೆಗ್ರೆ ಕವಿತೆ ವಾಚಿಸಿದರು. ಪತ್ರಕರ್ತ ಕೇಬಲ್ ನಾಗೇಶ ನಿರ್ವಹಿಸಿದರು.