ಚಿಕ್ಕಮಗಳೂರಿನ ಶ್ರೀ ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಅಕ್ಕಮಹಾದೇವಿ ಮಹಿಳಾ ಸಂಘದ ೧೫ನೆಯ ವಾರ್ಷಿಕೋತ್ಸವ ಹಾಗೂ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉಪನ್ಯಾಸಕಿ ಕುಸುಮಾ ಸಿz್ದÉÃಶ್ ಉದ್ಘಾಟಿಸಿದರು. ಯಮುನಾ ಚನ್ನಬಸಪ್ಪ ಶೆಟ್ಟಿ, ಕತ್ಯಾಯನಿ ಚಂದ್ರಶೇಖರ್, ಹೇಮಲತಾ, ಗೀತಾ ಜಗದೀಶ್ ಮತ್ತಿತರರಿದ್ದರು. 
ಜಿಲ್ಲೆ

ವ್ಯಕ್ತಿತ್ವಕ್ಕೆ ಬೆಲೆ ಸಿಗಲಿ

ನಿತ್ಯಾನಂದ ಎಸ್.ಎನ್.

ಚಿಕ್ಕಮಗಳೂರು: ಹೆಣ್ಣಿನ ಸೌಂದರ್ಯಕ್ಕಿAತ ವ್ಯಕ್ತಿತ್ವಕ್ಕೆ ಬೆಲೆ ಕೊಡುವಂತಾಗಬೇಕು. ಸೌಂದರ್ಯ ಆಸ್ತಿ ಆಗಬೇಕೆ ಹೊರತು ದೌರ್ಬಲ್ಯವಾಗಬಾರದು ಎಂದು ಉಪನ್ಯಾಸಕಿ ಕುಸುಮಾ ಸಿz್ದೆÃಶ್ ಅಭಿಪ್ರಾಯಪಟ್ಟರು.

ನಗರದ ಶ್ರೀ ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಅಕ್ಕಮಹಾದೇವಿ ಮಹಿಳಾ ಸಂಘದ ೧೫ನೆಯ ವಾರ್ಷಿಕೋತ್ಸವ ಹಾಗೂ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳಾ ಲೋಕಕ್ಕೆ ಅಕ್ಕ ಆದರ್ಶ. ಕನ್ನಡದ ಮೊದಲ ಕವಿತ್ರಿ ಅಕ್ಕಮಹಾದೇವಿ ವೈರಾಗ್ಯ ಮತ್ತು ವೈಚಾರಿಕತೆಗೆ ಹೆಸರಾದವಳು. ಸ್ತಿçÃಗೆ ಸ್ವಾತಂತ್ರÈ, ಸಮಾನತೆಯನ್ನು ೧೨ಶತಮಾನದಲ್ಲೇ ಪ್ರತಿಪಾದಿಸಿದ ಧೀರೆ. ಅವಳ ಅನೇಕ ವಚಗಳು ಇಂದೂ ಪ್ರಸ್ತುತ ಎಂದರು.
ಹೆಣ್ಣು ಎಂಬ ಕೀಳರಿಮೆ ಬೇಡ. ಎಲ್ಲ ಸಂಕೋಲೆಯಿAದ ಹೊರಬಂದಾಗ ಸಮಾಜದಲ್ಲಿ ಏನಾದರೂ ಸಾಧಿಸಲು ಸಾಧ್ಯ. ಲಿಂಗ ಅಸಮಾನತೆ ಮುಖ್ಯವಲ್ಲ. ಕೇವಲ ಹೆಣ್ಣಿನ ಸೌಂದರ್ಯಕ್ಕೆ ಬೆಲೆ ಕೊಡದೆ ಅವಳ ವ್ಯಕ್ತಿತ್ವಕ್ಕೆ ಬೆಲೆ ಕೊಟ್ಟಾಗ ಸಮಾಜದಲ್ಲಿ ಆಕೆಗೂ ಒಂದು ಬದುಕಿದೆ ಎಂಬುದು ಅರಿವಾಗುತ್ತದೆ ಎಂದು ಹೇಳಿದರು.
ಬಾಲ್ಯದಲ್ಲಿ ತಂದೆ, ತಾರುಣ್ಯದಲ್ಲಿ ಪತಿ, ಮುಪ್ಪಿನಲ್ಲಿ ಮಕ್ಕಳ ಆಶ್ರಯ ತಪ್ಪಿದ್ದಲ್ಲ. ಎಲ್ಲೋ ಹುಟ್ಟಿ, ಬೆಳೆದು ಪತಿಯ ಮನೆಸೇರಿ ಬೆಳಗುವಳು ಹೆಣ್ಣು. ಒಂದು ರೀತಿ ಹೆಣ್ಣು ನದಿಗಳಂತೆ. ಎಲ್ಲೋ ಹುಟ್ಟಿ ಸಮುದ್ರ ಸೇರಿದರೂ ಹರಿಯುವ ತಾಣವನ್ನೆಲ್ಲ ಹಸನುಗೊಳಿಸುತ್ತಾಳೆ. ಹೆಣ್ಣು ಬಳ್ಳಿಯಂತೆ ಹಬ್ಬಿ ಆಶ್ರಯದಾತಳಾಗುತ್ತಾಳೆಯೇ ಹೊರತು ಇನೊಬ್ಬರಿಗೆ ಅಸಡ್ಡೆಯಾಗುವುದಿಲ್ಲ. ಬದುಕಿನ ಜಟಕಾಬಂಡಿ ಓಡಿಸುವಂತ ಸ್ಥೆÊರ್ಯ ಆಕೆಯಲ್ಲಿದೆ ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷೆ ಕಾತ್ಯಾಯಿನಿ ಚಂದ್ರಶೇಖರ್ ಮಾತನಾಡಿ, ಗೌರಮ್ಮ ಬಸವೇಗೌಡರೊಂದಿಗೆ ೧೫ವರ್ಷಗಳ ಹಿಂದೆ ಅಕ್ಕಮಹಾದೇವಿ ಮಹಿಳಾ ಸಂಘವನ್ನು ಕಟ್ಟಿದ್ದು, ನಿರಂತರವಾಗಿ ಪ್ರತಿ ತಿಂಗಳು ಚಟುವಟಿಕೆ ನಡೆಸುತ್ತಾ ಉತ್ತಮವಾಗಿ ಕಾರ್ಯ ನಿರ್ವಹಿಸಿಕೊಂಡು ಬರಲಾಗುತ್ತಿದೆ. ಸಮುದಾಯ ಒಂದೂಗೂಡಿಸುವಲ್ಲಿ ಹಿರಿಯ ಸದಸ್ಯರ ಸಹಕಾರ ಅಗತ್ಯ. ಶರಣರು ಬರೆದ ವಚನಗಳನ್ನು ಜೀವನದಲ್ಲಿ ಪಾಲಿಸಿದಾಗ ಜೀವನ ಸಾರ್ಥಕ. ಎಲ್ಲರೊಳೊಂದಾಗಿ ಸೇವಾಕಾರ್ಯದಲ್ಲಿ ಕೈಜೋಡಿಸಿದಾಗ ಸಂಘ ಉಳಿದು ಬೆಳೆಯಲು ಸಾಧ್ಯ ಎಂದು ಹೇಳಿದರು.
ಅಕ್ಕಮಹಾದೇವಿ ಮಹಿಳಾ ಸಂಘದ ಅಧ್ಯಕ್ಷೆ ಯಮುನಾ ಚನ್ನಬಸಪ್ಪಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ೧೫ವರ್ಷಗಳಿಂದ ಸಂಘ ಸದಸ್ಯರೆಲ್ಲರ ಸಹಕಾರದಿಂದ ಸೌಹಾರ್ದತೆಯಿಂದ ಚೆನ್ನಾಗಿ ನಡೆದುಕೊಂಡು ಬರುತ್ತಿದೆ. ಮುಂದಿನ ದಿನಗಳಲ್ಲಿ ಹೊಸ ಕಾರ್ಯಕಾರಿ ಸಮಿತಿ ರಚನೆಗೊಂಡು ಮತ್ತಷ್ಟು ಸಾಮಾಜಿಕ ಸೇವಾ ಕಾರ್ಯಗಳು ನಡೆಯುವಂತಾಗಲಿ ಎಂದು ಆಶಿಸಿದರು.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ. ೯೦ರಷ್ಟು ಅಂಕಗಳಿಸಿದ ೨೦ವಿದ್ಯಾರ್ಥಿಗಳಿಗೆ ತಲಾ ಒಂದುಸಾವಿರದAತೆ ಒಟ್ಟು ೨೦ ಸಾವಿರ ರೂ. ಹಾಗೂ ಪ್ರಶಸ್ತಿಪತ್ರವನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.
ನಿರ್ದೇಶಕರಾದ ಹೇಮಲತಾ, ಗೀತಾ ಜಗದೀಶ್, ಪ್ರಮುಖರಾದ ದಾಕ್ಷಾಯಣಿ ಸತೀಶ್ಚಂದ್ರ, ಈಶ್ವರಿ ಹುಲಿಯಪ್ಪ, ಪ್ರಮೀಳಾ ಕಲ್ಲೇಶ್, ವೀಣಾ ವಿಶ್ವನಾಥ್, ಲತಾ ಪ್ರಸನ್ನ, ಪಾರ್ವತಿ, ವಿಶಾಲ ಯೋಗೀಶ್, ಮಾನಸ, ಮಧುಮತಿ, ಪುಷ್ಪಾ, ಹೇಮಲತಾ ಮತ್ತಿತರರಿದ್ದರು.