ಜಿಲ್ಲೆ

ಹಲ್ಲೆಗೈದವರ ಮೇಲೆ ಕಾನೂನು ಕ್ರಮವಾಗಲಿ

ವಿನಯ ಹೆಗಡೆ

ಮುಂಡಗೋಡ: ದೇವನಹಳ್ಳಿ ವಕೀಲರ ಸಂಘದ ಸದಸ್ಯನ ಮೇಲೆ ಹಲ್ಲೆ ಮಾಡಿದವರಿಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ವಕೀಲರ ರಕ್ಷಣಾ ಕಾಯ್ದೆ ಜಾರಿಗೊಳಿಸಬೇಕು ಎಂದು ತಾಲೂಕು ವಕೀಲರ ಸಂಘದವರು ಗ್ರೇಡ್-2 ತಹಸೀಲ್ದಾರ್ ಜಿ.ಬಿ. ಭಟ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸೋಮವಾರ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಆಗಾಗ ವಕೀಲರ ಮೇಲೆ ಹಲ್ಲೆಗಳು ನಡೆಯುತ್ತಿವೆ. ಈ ಹಿಂದೆಯೂ ವಕೀಲರ ಮೇಲೆ ಹಲ್ಲೆ ನಡೆದಿದ್ದು, ಇದೀಗ ದೇವನಹಳ್ಳಿ ಎಂಬಲ್ಲಿ ವಕೀಲರ ಸಂಘದ ಸದಸ್ಯನ ಮೇಲೆ ಹಲ್ಲೆ ಮಾಡಲಾಗಿದ್ದು, ಹಲ್ಲೆ ನಡೆಸಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ವಕೀಲರಿಗೆ ರಕ್ಷಣೆ ನೀಡುವ ಕೆಲಸವಾಗಬೇಕು ಎಂದು ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.

ಗುಡ್ಡಪ್ಪ ಕಾತೂರ, ಸಲೀಂ ನಂದಿಗಟ್ಟಿ, ನಟರಾಜ ಕಾತೂರ, ರಾಜು ಹಂಚಿನಮನಿ, ರಾಜಶೇಖರ ಹುಬ್ಬಳ್ಳಿ, ಇತರರಿದ್ದರು.