ಸರಗೂರು ತಾಲೂಕಿನ ಕೊತ್ತೇಗಾಲ ಗ್ರಾಮದಲ್ಲಿ ಆಯೋಜಿಸಿದ್ದ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮವನ್ನು ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ಉದ್ಘಾಟಿಸಿದರು. ಚಿಕ್ಕರಾಜಶೆಟ್ಟಿ, ವಿಮಲಾ, ಚಲುವಪ್ಪ ಇದ್ದರು. 
ಜಿಲ್ಲೆ

ಕ್ಷಯಮುಕ್ತ ಗ್ರಾಪಂಗೆ ಜನರು ಸಹಕರಿಸಲಿ

ಸರಗೂರು: ಕ್ಷಯಮುಕ್ತ ಗ್ರಾಮ ಪಂಚಾಯತಿ ನಿರ್ಮಾಣ ಮಾಡಲು ತಾಲೂಕು ಆರೋಗ್ಯಾಧಿಕಾರಿ ಡಾ.ಟಿ. ರವಿಕುಮಾರ್ ಮನವಿ ಮಾಡಿದರು.

ತಾಲೂಕಿನ ಕೊತ್ತೇಗಾಲ ಗ್ರಾಮದಲ್ಲಿ ಸೋಮವಾರ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕ್ಷಯರೋಗವು ರೋಗಿಯು ಕೆಮ್ಮಿದಾಗ ಹಾಗೂ ಸೀನಿದಾಗ ಒಬ್ಬರಿಂದ ಒಬ್ಬರಿಗೆ ಗಾಳಿಯ ಮುಖಾಂತರ ಹರಡುವ ಕಾಯಿಲೆ. ತಾಲೂಕಿನಲ್ಲಿ ಹಲವಾರು ವರ್ಷಗಳಿಂದ ಕಾಯಿಲೆಯನ್ನು ಪತ್ತೆ ಹಚ್ಚಿ ಉಚಿತವಾಗಿ ಚಿಕಿತ್ಸೆ ಕೊಡುತ್ತಾ ಬರಲಾಗುತ್ತಿದೆ. ಕ್ಷರೋಗವನ್ನು ಕೊನೆಗೊಳಿಸುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ. ಆದ್ದರಿಂದ ಸರ್ಕಾರವು ಕ್ಷಯರೋಗ ಮುಕ್ತಗೊಳಿಸಲು ಕ್ಷಯಮುಕ್ತ ಗ್ರಾಮ ಪಂಚಾಯಿತಿ ನಿರ್ಮಾಣ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಮಾಹಿತಿ ನೀಡಿದರು.

ಕೊತ್ತೇಗಾಲ ಗ್ರಾಪಂ ಅಧ್ಯಕ್ಷ ಚಿಕ್ಕರಾಜಶೆಟ್ಟಿ, ಉಪಾಧ್ಯಕ್ಷೆ ವಿಮಲಾ, ಸದಸ್ಯರಾದ ಶೋಭಾ ಸುಂದರ್, ಮಹದೇವ, ಚಲುವಪ್ಪ, ಕುಮಾರ್, ಪಿಡಿಒ ನಾಗೇಂದ್ರ, ಆಶಾ ಕಾರ್ಯಕರ್ತರು ಇದ್ದರು.