ಜಿಲ್ಲೆ

ನಿವೃತ್ತ ನೌಕರರ ಪಿಂಚಣಿ ಪರಿಷ್ಕರಿಸಲಿ

ಅಥಣಿ: ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂ ಅಥಣಿ ತಾಲೂಕು ಟಕದ ಪದಾಧಿಕಾರಿಗಳು ಕೇಂದ್ರ ಸರ್ಕಾರದ ಪಿಂಚಣಿ ಪರಿಷ್ಕರಣೆ ನಿರಾಕರಣೆ ಖಂಡಿಸಿ ಈಚೆಗೆ ಪ್ರತಿಭಟಿಸಿ ತಹಸೀಲ್ದಾರ್​ ಸಿದ್ರಾಯ ಬೋಸಗಿಗೆ ಮನವಿ ಸಲ್ಲಿಸಿದರು.

ತಾಲೂಕಾಧ್ಯಕ್ಷ ಎಸ್​.ಎಸ್​.ಹೂಟಿ ಮಾತನಾಡಿ, ಹಳೇ ಪಿಂಚಣಿ ಸೌಲಭ್ಯ ನಿರಾಕರಣೆಯಿಂದ ನಿವೃತ್ತ ನೌಕರರ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿವೆ. ಕೂಡಲೇ ಪಿಂಚಣಿ ಪರಿಷ್ಕರಿಸುವಂತೆ ಆಗ್ರಹಿಸಿದರು.

ಸಂದ ಕಾರ್ಯದರ್ಶಿ ಎಸ್​.ಆರ್​.ಗಸ್ತಿ ಮಾತನಾಡಿದರು. ನಿವೃತ್ತ ನೌಕರರಾದ ಪ್ರಕಾಶ ಕೋತ್​, ಜಿ.ಕೆ. ಅಂಬಿ, ಕೆ.ಎ.ಶಿರಗಾವಕರ್​, ಎಸ್​.ಕೆ. ಹೊಳೆಪ್ಪನವರ, ದೇವೇಂದ್ರ ಬಿಸ್ವಾಗರ್​, ಆರ್​.ಜಿ. ಬಿರಾದಾರ, ಬಿ.ಎ. ಕಕಮರಿ, ಡಿ.ಬಿ. ಮಾಂಗ, ಕೆ.ಎ. ದೇಸಾಯಿ, ಎಂ.ಬಿ. ಚೌಗಲೆ, ಎ.ಎಂ. ಬರ್ಲಿ, ಎಸ್​.ಆರ್​. ವಾಲಿಕಾರ, ಐ.ಕೆ. ಕುಂಬಾರ ಇತರರು ಇದ್ದರು.