ಅರಕಲಗೂಡು ಪಟ್ಟಣದಲ್ಲಿ ಗುರುವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎ. ಮಂಜು, ಸೌಮ್ಯ, ಸುಭಾನ ಷರೀಫ್, ರಶ್ಮಿ, ರವಿಕುಮಾರ್ ಇತರರು ಇದ್ದರು. 
ಜಿಲ್ಲೆ

ಪಾಲಕರು ಮಕ್ಕಳಿಗೆ ಮಹಾಗ್ರಂಥಗಳನ್ನು ಓದಿಸಲಿ

ವಸಂತಕುಮಾರ್ ಬಿ

ಅರಕಲಗೂಡು: ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಜಗತ್ತಿಗೆ ಮಾದರಿ ಗ್ರಂಥವಾಗಿದೆ ಎಂದು ಶಾಸಕ ಎ. ಮಂಜು ಅಭಿಪ್ರಾಯಪಟ್ಟರು.

ಪಟ್ಟಣದ ದೇವರಾಜ ಅರಸು ಭವನದಲ್ಲಿ ತಾಲಕು ಆಡಳಿತ, ತಾಲೂಕು ಪಂಚಾಯತಿ, ಸಮಾಜ ಕಲ್ಯಾಣ ಇಲಾಖೆ, ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಯಂತಿ ಉತ್ಸವಗಳನ್ನು ಬಹಳ ಉತ್ಸುಕತೆಯಿಂದ ಆಚರಿಸುತ್ತೇವೆ. ಜನಾಂಗದ ಪ್ರೇರಣೆ, ಪೋಷಣೆ ಇಲ್ಲದಿದ್ದರೆ ಯಾವ ಆಚರಣೆಗಳು ಯಶಸ್ವಿಯಾಗುವುದಿಲ್ಲ. ಇದಕ್ಕೆ ಜನಾಂಗಿಯ ಸಹಾಭಾಗಿತ್ವ ಮುಖ್ಯ ಎಂದರು.

ರಾಮಾಯಣದ ಸಾರಾಂಶವನ್ನು ಜನರಿಗೆ ತಿಳಿಸಲು ಪೌರಾಣಿಕ ನಾಟಕಗಳನ್ನು ಮಾಡುತ್ತಿದ್ದರು. ಇಂದು ಬಿಡುಗಡೆಯಾದ ಕಾರ್ಯಕ್ರಮಗಳು ವರ್ಷವಿಡೀ ಓಡಬಹುದು. ಆದರೆ ಸಾವಿರಾರು ವರ್ಷ ಕಳೆದರೂ ರಾಮಾಯಣ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ ಹೇಳಿದರು.

ಪೋಷಕರು ಮಕ್ಕಳಿಗೆ ರಾಮಾಯಣ, ಮಹಾಭಾರತ ಪುಸ್ತಕಗಳನ್ನು ಓದುವ ಹವ್ಯಾಸ ಮಾಡಿಸಬೇಕು. ಇದರಿಂದ ಮಕ್ಕಳಿಗೆ ಆದರ್ಶವಾಗಿ ಹೇಗೆ ಬದುಕಬೇಕೆಂದು ಅರಿವಾಗುತ್ತದೆ ಎಂದರು. ಮುಖಂಡ ಅಲ್ಲಾಪಟ್ಟಣ ಸತೀಶ್ ಪ್ರಧಾನ ಭಾಷಣ ಮಾಡಿದರು. ತಹಸೀಲ್ದಾರ್ ಸೌಮ್ಯಾ, ಪಪಂ ಉಪಾಧ್ಯಕ್ಷೆ ಸುಭಾನ ಷರೀಫ್, ಮುಖ್ಯಾಧಿಕಾರಿ ಬಸವರಾಜ ಟಾಕಪ್ಪ ಶಿಗ್ಗಾವಿ, ಸದಸ್ಯೆ ರಶ್ಮಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ಇತರರು ಇದ್ದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುನಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.