ಅರಕಲಗೂಡು: ಸಮಾಜಕ್ಕೆ ದಾರಿದೀಪವಾಗಿದ್ದ 12ನೇ ಶತಮಾನದ ಶಿವ ಶರಣರ ವಚನಗಳು ಸರ್ವ ಕಾಲಕ್ಕೂ ಅನ್ವಯವಾಗಲಿದ್ದು, ಇಂದಿನ ಶಿವಶರಣರು ಅವರ ಆದರ್ಶ, ತತ್ವಗಳನ್ನು ಅಳವಡಿಸಿಕೊಂಡು ಮುನ್ನಡೆದರೆ ನಾಡು ಸುಭೀಕ್ಷವಾಗಲಿದೆ ಎಂದು ತೇಜೂರು ಮಠದ ಶ್ರೀ ಕಲ್ಯಾಣ ಸ್ವಾಮೀಜಿ ಹೇಳಿದರು.
ತಾಲೂಕು ಶರಣ ಸಾಹಿತ್ಯ ಪರಿಷತ್ ಹಾಗೂ ಶ್ರೀ ಮಠದ ವತಿಯಿಂದ ಇತ್ತೀಚೆಗೆ ಹಳ್ಳಿಮೈಸೂರು ಹೋಬಳಿ ತೇಜೂರು ಶ್ರೀ ಸಿದ್ದರಾಮೇಶ್ವರ ಮಠದಲ್ಲಿ ಆಯೋಜಿಸಿದ್ದ ಶ್ರೀ ಮಠದ ಗದ್ದಿಗೆ ಪೂಜೆ ಹಾಗೂ ಸೇವಾದೀಕ್ಷಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಪಾಲಕರು ಮಕ್ಕಳಿಗೆ ಸಂಸ್ಕಾರ ನೀಡುವ ಮೂಲಕ ಅವರ ಉನ್ನತ ಭವಿಷ್ಯಕ್ಕೆ ನೆರವಾಗಬೇಕಿದೆ ಎಂದರು.
ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಮಾತನಾಡಿ, ಶರಣ ಸಾಹಿತ್ಯ ಪರಿಷತ್‌ನ ಆಗುಹೋಗುಗಳು ಮತ್ತು ಶರಣರ ವಿಚಾರಧಾರೆಗಳನ್ನು ಹೆಚ್ಚಿನ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ತಲುಪಿಸಲಾಗುವುದು ಎಂದು ತಿಳಿಸಿದರು.
ಪರಿಷತ್‌ನ ಹಿರಿಯ ಸಾಹಿತಿಗಳಾದ ಪ್ರಭುಶಂಕರ್ ಶರಣರ ವಿಚಾರ ಧಾರೆಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್, ವಕೀಲ ರಾಜಶೇಖರ್, ವಸಂತ್ ಕುಮಾರ್ ನಿವೃತ್ತ ಶಿಕ್ಷಕರಾದ ಪರಮೇಶ್ವರಪ್ಪ, ಮಹದೇವಪ್ಪ,ಬಿ.ಪಿ. ವೀರಭದ್ರಪ್ಪ, ವೀರೇಶ್, ಮಹಾ ವೇದಿಕೆ ತಾಲೂಕು ಅಧ್ಯಕ್ಷರು ತೇಜಮೂರ್ತಿ, ಸಭಾ ಸಭಾ ಕಾರ್ಯದರ್ಶಿ ನಂದೀಶ್, ಜಿಲ್ಲಾ ನಿರ್ದೇಶಕರ ಜಯಶಂಕರ್, ಶಿವನಂದ್, ತಾಪಂ ಮಾಜಿ ಸದಸ್ಯ ಶಿವಸ್ವಾಮಿ, ಮುಖಂಡರಾದ ಸುರೇಶ್, ಕೆರಗೋಡು ನಂಜಪ,್ಪ ಮಿಲ್ ಜಯಣ್ಣ, ಪ್ರಸಾದ್, ಪುನೀತ್, ಚಿದಾನಂದ್, ತಮ್ಮಣ್ಣಇತರರಿದ್ದರು.