ಬಾದಾಮಿ: ಅಧಿಕಾರಿಗಳು ಜನರ ಜತೆ ಸೌಜನ್ಯದಿಂದ ವರ್ತಿಸಿ ಜನರ ದನಿಯಾಗಿ ಕೆಲಸ ಮಾಡಬೇಕು. ಮುಂದಿನ ಸಭೆಗೆ ಅಧಿಕಾರಿಗಳು ತಮ್ಮ ಇಲಾಖೆಯ ಸಂಪೂರ್ಣ ಮಾಹಿತಿಯೊಂದಿಗೆ ಕಡ್ಡಾಯವಾಗಿ ಹಾಜರಾಗಬೇಕೆಂದು ನಂದಿಕೇಶ್ವರ ಗ್ರಾಪಂ ಅಧ್ಯಕ್ಷೆ ಗಂಗಮ್ಮ ಗೋವಣಕಿ ಖಡಕ್ ಸೂಚನೆ ನೀಡಿದರು.
ನಂದಿಕೇಶ್ವರ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡ ಕರ್ನಾಟಕ ಅಭಿವೃದ್ಧಿ(ಕೆಡಿಪಿ) ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಭೆಯಲ್ಲಿ ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆರೋಗ್ಯ ಇತರ ಇಲಾಖೆಗಳ ಅಧಿಕಾರಿಗಳು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು. ಸಭೆಯಲ್ಲಿ ಗ್ರಾ.ಪಂ.ಉಪಾಧ್ಯಕ್ಷ ಲಕ್ಷ್ಮಣ ಕೂಚಲ, ಸದಸ್ಯರಾದ ಎಸ್.ಎಂ.ಹಂಗರಗಿ, ಎಚ್.ಕೆ. ಕೆರಿಹೊಲದ, ಬಸವರಾಜ ತಳವಾರ, ಆರ್.ಬಿ.ಹುಲ್ಲೂರ, ಮಲ್ಲಪ್ಪ ಗಾರವಾಡ, ಎಲ್.ಎಸ್.ವೀರಲಿಂಗನಗೌಡ್ರ ಉಪಸ್ಥಿತರಿದ್ದರು. ಪಿಡಿಒ ಎಸ್.ಸಿ.ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಎಸ್.ಎಂ.ಬೆಲ್ಲದ ಸ್ವಾಗತಿಸಿ ವಂದಿಸಿದರು.