ನಂದೇಶ್ವರ: ಬಾಲ್ಯದಲ್ಲೇ ಶಿಕ್ಷಣದ ಜತೆಗೆ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಕಲಿಸುವುದು ಬಹುಮುಖ್ಯ. ಪ್ರಸ್ತುತ ದಿನಗಳಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಯಾಗಬೇಕು. ಗುರು ಹಿರಿಯರನ್ನು ಯಾರು ಗೌರವಿಸುತ್ತಾರೋ ಅವರ ಬದುಕು ಯಶಸ್ಸಿನತ್ತ ಸಾಗುತ್ತದೆ ಎಂದು ಇಳಕಲ್ಲ ಮಠದ ಗುರುಮಹಾಂತ ಸ್ವಾಮೀಜಿ ಹೇಳಿದರು.
ಸಮೀಪದ ಸವದಿ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶರಣೆ ಶಿವಕ್ಕ ಕೊಪ್ಪದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಿರೂರದ ಡಾ.ಬಸವಲಿಂಗ ಸ್ವಾಮೀಜಿ, ಬಸವಬೆಳವಿಯ ಶರಣಬಸವ ದೇವರು, ಜನವಾಡ ಅಲ್ಲಮಪ್ರಭು ಆಶ್ರಮದ ಮಲ್ಲಿಕಾರ್ಜುನ ಸ್ವಾಮೀಜಿ, ಕಲಬುರಗಿಯ ಪ್ರಭುಶ್ರೀ ತಾಯಿ ಮಾತನಾಡಿದರು. ವಿವಿಧ ಗಣ್ಯರು ಶತಾಯುಷಿ ಶರಣೆ ಶಿವಕ್ಕ ಕೊಪ್ಪದ ಅವರನ್ನು ಗೌರವಿಸಿದರು.
ಶತಾಯುಷಿ ಶರಣೆ ಶಿವಕ್ಕ ಕೊಪ್ಪದ, ಸಂಗಪ್ಪ ಕೊಪ್ಪದ, ಮಹಾದೇವ ಕವಟಕೊಪ್ಪ, ಡಾ.ಶ್ರೀಶೈಲ ಕೊಪ್ಪದ, ಶಿವಬಸಪ್ಪ ಕೊಪ್ಪದ, ನಾಗಪ್ಪ ಠಕ್ಕನ್ನವರ, ಸಿದ್ದಪ್ಪ ಕೊಪ್ಪದ, ಎಸ್.ಎಲ್.ಬಾಡಗಿ, ರಮೇಶ ಸಿಂದಗಿ, ರಾಣಿ ಚನ್ನಮ್ಮ ಶಿಕ್ಷಣ ಸಂಸ್ಥೆ ಅಧ್ಯಕ್ಷ ಧರೆಪ್ಪ ಠಕ್ಕನ್ನವರ, ಪ್ರಕಾಶ ಪಾಟೀಲ, ಜಿನ್ನಪ್ಪ ಸುರಗೋಣ, ರಮೇಶ ಕೊಪ್ಪದ, ಸುರೇಶ ಸಂತಿ ಇತರರಿದ್ದರು. ಪ್ರಕಾಶ ಪಾಟೀಲ ನಿರೂಪಿಸಿದರು, ರಮೇಶ ಕೊಪ್ಪದ ವಂದಿಸಿದರು.