ಜಿಲ್ಲೆ

ಹೊಸಬರು ತರಬೇತಿ ಪಡೆದು ಸಿನಿಮಾ ಕ್ಷೇತ್ರಕ್ಕೆ ಬರಲಿ:ಗೀತರಚನೆಕಾರ ನಾಗೇಂದ್ರ ಪ್ರಸಾದ್​ ಸಲಹೆ

ಬೆಂಗಳೂರು: ಸಿನಿಮಾ ಕ್ಷೇತ್ರದಲ್ಲಿ ಸಾಕಷ್ಟು ಪೈಪೋಟಿ ಇದೆ. ಹಾಗಾಗಿ, ಚಿತ್ರದಲ್ಲಿ ನಟಿಸುವ ಮುನ್ನ ಉನ್ನತ ಮಟ್ಟದ ತರಬೇತಿ ಪಡೆದರೆ ಮಾತ್ರ ಅವಕಾಶ ಹುಡುಕಿಕೊಂಡು ಬರಲಿದೆ ಎಂದು ಚಿತ್ರಸಾಹಿತಿ ನಾಗೇಂದ್ರ ಪ್ರಸಾದ್​ ಹೇಳಿದ್ದಾರೆ.

ಮಹಾಲ್ಮ ಲೇಔಟ್​ ಕ್ಷೇತ್ರದ ಪುನೀತ್​ ರಾಜಕುಮಾರ್​ ವಾರ್ಡ್​ನಲ್ಲಿ ಶ್ರೀ ರಕ್ಷಾ ಕ್ರೀಡಾ ಹಾಗೂ ಸಾಂಸತಿಕ ಟ್ರಸ್ಟ್​ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ "ರಕ್ಷಾ ಫಿಲ್ಮ್​ ಇನ್​ಸ್ಟಿಟ್ಯೂಟ್​' ಉದ್ಘಾಟಿಸಿ ಮಾತನಾಡಿದರು.

ಮಕ್ಕಳಲ್ಲಿರುವ ಪ್ರತಿಭೆ ಹೊರಗೆ ಬರಲು ತರಬೇತಿ ಪ್ರಮುಖವಾಗಿರುತ್ತದೆ. ಶ್ರದ್ಧೆ, ಭಕ್ತಿಯಿಂದ ಕಲಿತರೆ ಮಾತ್ರ ಭವಿಷ್ಯ ಉಜ್ವಲವಾಗುತ್ತದೆ. ಚಿತ್ರರಂಗದಲ್ಲಿ ಭವಿಷ್ಯ ಕಟ್ಟಿಕೊಳ್ಳುವ ಯುವಕ& ಯುವತಿಯರು ಸಾಕಷ್ಟು ತರಬೇತಿ ಪಡೆದಾಗ ಮಾತ್ರ ಒಳ್ಳೆಯ ಪಾತ್ರಗಳಲ್ಲಿ ನಟಿಸಲು ಅವಕಾಶ ದೊರೆಯಲಿದೆ ಎಂದು ಕಿವಿಮಾತು ಹೇಳಿದರು.

ಇನ್​ಸ್ಟಿಟ್ಯೂಟ್​ನ ಸಂಸ್ಥಾಪಕ ಜಾಗ್ವಾರ್​ ಸಣ್ಣಪ್ಪ ಮಾತನಾಡಿ, ಹಲವು ಮಕ್ಕಳು ಚಿತ್ರರಂಗದಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ಬರುತ್ತಾರೆ. ಆದರೆ, ಸೂಕ್ತ ತರಬೇತಿ ಇಲ್ಲದೆ ಅರ್ಧದಲ್ಲೇ ಅವಕಾಶದಿಂದ ವಂಚಿತರಾಗಿ ಸಾಧನೆ ಮಾಡಲು ವಿಲರಾಗುತ್ತಾರೆ. ಇಂತಹ ಕೊರತೆ ನೀಗಿಸಲು ಹೊಸದಾಗಿ ಇನ್​ಸ್ಟಿಟ್ಯೂಟ್​ ತೆರೆದಿದ್ದೇವೆ. ನಟನೆ, ನಿರ್ದೇಶನ, ಸಾಹಸ, ನೃತ್ಯ ಕುರಿತು ತರಬೇತಿ ನೀಡಲಾಗುತ್ತದೆ ಎಂದರು. ಸಂದ ಅಧ್ಯೆ ಲಕ್ಷ್ಮೀ ಸಣ್ಣಪ್ಪ, ದೇಹದಾರ್ಢ್ಯ ಪಟು ಪ್ರಸಾದ್​ ಕುಮಾರ್​ ಇತರರಿದ್ದರು.