ಜಿಲ್ಲೆ

ಪ್ರತಿಯೊಬ್ಬರೂ ರಾಷ್ಟ್ರ ಧರ್ಮ ಬೆಳೆಸಿಕೊಳ್ಳಲಿ

Haveri - Desk - Ganapati Bhat

ರಟ್ಟಿಹಳ್ಳಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪ್ರತಿನಿತ್ಯ ಶಾಖೆಗಳಲ್ಲಿ ಅರಿವಿನೊಳಗೆ ಗುರುವನ್ನು ಪ್ರತಿಷ್ಠಾಪನೆಯ ಕಾರ್ಯ ಮಾಡುತ್ತಿದ್ದು, ಪ್ರತಿಯೊಬ್ಬ ವ್ಯಕ್ತಿ ಮನೆ, ಮನಗಳಲ್ಲಿ ಅರಿವಿನ ಗುರು ಜಾಗೃತಿಯಾದಾಗ ಮಾತ್ರ ಭಾರತ ವಿಶ್ವ ಗುರು ಆಗುವ ದಿನವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಧಾರವಾಡ ವಿಭಾಗ ಬೌದ್ಧಿಕ ಪ್ರಮುಖ ಗುರುರಾಜ ಕುಲಕರ್ಣಿ ಹೇಳಿದರು.

ಪಟ್ಟಣದ ಧರ್ಮಗಿರಿ ಮಠದ ಆವರಣದಲ್ಲಿ ರಟ್ಟಿಹಳ್ಳಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ ಗುರು ಪೂಜಾ ಉತ್ಸವದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತ ಜ್ಞಾನ ಪ್ರಧಾನ ದೇಶ. ಯಾರು ಅಜ್ಞಾನದಿಂದ ಸುಜ್ಞಾನದ ಕಡೆ ನಡೆಸುವನು ಅವರನ್ನು ಗುರು ಎಂದು ಭಾವಿಸಿ ಪೂಜಿಸಲಾಗುವುದು. ಸಂಘದಲ್ಲಿ ವ್ಯಕ್ತಿ ಪರಿಪೂರ್ಣವಲ್ಲದ ಕಾರಣ ಭಗವಾಧ್ವಜವನ್ನು ಆಯ್ಕೆ ಮಾಡಿ ಗುರುವಾಗಿ ಪೂಜಿಸಲಾಗುವುದು. ಧರ್ಮ ಎಂದರೆ ಕೇವಲ ಪೂಜಾ ಪದ್ಧತಿಯಲ್ಲ ಮನುಷ್ಯ ತನ್ನ ಜೀವನ ಪದ್ಧತಿಯಲ್ಲಿ ಸತ್ಯವಾಗಿ ನಡೆಯುವುದು ಹಾಗೂ ಪ್ರತಿಯೊಬ್ಬರಲ್ಲೂ ರಾಷ್ಟ್ರ ಧರ್ಮ ಬೆಳೆಸಿಕೊಳ್ಳುವುದು ಮುಖ್ಯ ಎಂದರು.

ರಾಜು ವೆರ್ಣೇಕರ್, ಕುಮಾರಸ್ವಾಮಿ ಗೌಡರ, ಮುತ್ತು ಬೆಣ್ಣಿ, ಆಕಾಶಗೌಡ ಪಾಟೀಲ, ಸೋಮಣ್ಣ ಹುರಕಡ್ಲಿ, ಶರಣಬಸವ ನ್ಯಾಮತಿ, ಸಂತೋಷ ಕಾಪ್ಸೀಕರ್ ಇತರರು ಇದ್ದರು.