ಬೇವಿನಕೊಪ್ಪ ಬಳಿ ಸೇತುವೆ ಪಕ್ಕದಲ್ಲಿ ರಾಯಣ್ಣ ಪ್ರತಿಮೆ ನಿರ್ಮಿಸುವಂತೆ ಬೆಂಗಳೂರಿನಲ್ಲಿ ಎಚ್.ಎಂ. ರೇವಣ್ಣ ಅವರಿಗೆ ವಿಜಯಾನಂದ ಸ್ವಾಮೀಜಿ ಮನವಿ ಸಲ್ಲಿಸಿದರು. ನಾಗಣ್ಣ, ರುದ್ರಪ್ಪ ಬೇವಿನಗಿಡದ, ಮಹಾಂತೇಶ ಅಂಗಡಿ, ಮಲ್ಲಿಕಾರ್ಜುನ ಪೂಜೇರ ಇದ್ದರು. 
ಜಿಲ್ಲೆ

ಸೇತುವೆಗೆ ರಾಯಣ್ಣನ ಹೆಸರು ಇಡಲಿ

ಬೈಲಹೊಂಗಲ: ಬೇವಿನಕೊಪ್ಪ ಗ್ರಾಮದ ಬಳಿ ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಸೇತುವೆಗೆ ರಾಯಣ್ಣ ಸೇತುವೆ ಎಂದು ಹೆಸರಿಟ್ಟು , ಪಕ್ಕದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಿಸುವಂತೆ

ಬೇವಿನಕೊಪ್ಪ ಗ್ರಾಮದ ನಿತ್ಯಾನಂದ ಆಶ್ರಮದ ವಿಜಯಾನಂದ ಸ್ವಾಮೀಜಿ ಅವರು ಸಂಗೊಳ್ಳಿ ರಾಯಣ್ಣ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ ಅವರನ್ನು ಬೆಂಗಳೂರಿನ ಕಚೇರಿಯಲ್ಲಿ ಭೇಟಿಯಾಗಿ ಭಾನುವಾರ ಮನವಿ ಸಲ್ಲಿಸಿದರು.

ಮನವಿಗೆ ಸ್ಪಂದಿಸಿದ ಎಚ್.ಎಂ. ರೇವಣ್ಣ ಅವರು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ರಾಯಣ್ಣ ಪ್ರತಿಮೆ ನಿರ್ಮಾಣಕ್ಕೆ ಆದೇಶಿಸಿದರು. ಶಾಸಕ ಮಹಾಂತೇಶ ಕೌಜಲಗಿ ಅವರೊಂದಿಗೆ, ಪ್ರತಿಮೆ ನಿರ್ಮಾಣದ ರೂಪುರೇಷೆ ಕುರಿತು ಚರ್ಚಿಸಿದರು. ಸಂಗೊಳ್ಳಿ ರಾಯಣ್ಣ ಚಲನಚಿತ್ರದ ನಿರ್ದೇಶಕ ನಾಗಣ್ಣ, ರುದ್ರಪ್ಪ ಬೇವಿನಗಿಡದ, ಮಹಾಂತೇಶ ಅಂಗಡಿ, ಮಲ್ಲಿಕಾರ್ಜುನ ಪೂಜೇರ, ಉಮೇಶ ಪೂಜೇರ ಇದ್ದರು.