ಕೊಪ್ಪಳ ಡಿಸಿ ಕಚೇರಿ ಸಭಾಂಗಣದಲ್ಲಿ ಕಾಲು-ಬಾಯಿ ರೋಗ ಲಸಿಕಾ ಅಭಿಯಾನ ಪೋಸ್ಟರನ್ನು ಎಡಿಸಿ ಸಿದ್ರಾಮೇಶ್ವರ ಬಿಡುಗಡೆಗೊಳಿಸಿದರು. ಪಶುಪಾಲನಾ ಇಲಾಖೆ ಡಿಡಿ ಡಾ.ಪಿ.ಎಂ.ಮಲ್ಲಯ್ಯ, ಯಲಬುರ್ಗಾ ಸಹಾಯಕ ನಿರ್ದೇಶಕ ಡಾ.ಪ್ರಕಾಶ, ಕೊಪ್ಪಳ ಸಹಾಯಕ ನಿರ್ದೇಶಕ ಡಾ.ವಿನೋದ ಕುವಾರ್, ಕುಕನೂರ ಸಹಾಯಕ ನಿರ್ದೇಶಕ ಡಾ.ಸುರೇಶ್ ಇತರರಿದ್ದರು. 
ಜಿಲ್ಲೆ

ಜಾನುವಾರುಗಳು ಲಸಿಕೆಯಿಂದ ವಂಚಿತವಾಗದಿರಲಿ

ಕೊಪ್ಪಳ: ಜಾನುವಾರುಗಳನ್ನು ಕಾಲು-ಬಾಯಿ ರೋಗದಿಂದ ಮುಕ್ತಗೊಳಿಸಲು ಎಲ್ಲ ರಾಸುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿ ಎಂದು ಎಡಿಸಿ ಸಿದ್ರಾಮೇಶ್ವರ ಹೇಳಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶನಿವಾರ ಕಾಲು-ಬಾಯಿ ಲಸಿಕಾ ಅಭಿಯಾನ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು. ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಯೋಜನೆಯಡಿ ಜಿಲ್ಲೆಯ ಜಾನುವಾರುಗಳಿಗೆ ಕಾಲು-ಬಾಯಿ ರೋಗಕ್ಕೆ 7ನೇ ಸುತ್ತಿನ ಲಸಿಕೆ ಹಾಕಬೇಕಿದೆ. ಏ.21ರಿಂದ ಜೂ.4ರವರೆಗೆ ಲಸಿಕಾ ಅಭಿಯಾನ ನಡೆಯಲಿದೆ. ರೈತರಿಗೆ ಆರ್ಥಿಕ ಸಂಕಷ್ಟ ಉಂಟು ವಾಡುವ ರೋಗದಿಂದ ಮುಕ್ತ ಮಾಡಬೇಕಿದೆ. ಜಿಲ್ಲೆಯಲ್ಲಿ ಲಸಿಕಾ ಅಭಿಯಾನವನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿ. ಎಲ್ಲ ಜಾನುವಾರುಗಳಿಗೆ ಲಸಿಕೆ ಹಾಕಿ. ಈ ಬಗ್ಗೆ ರೈತರು, ಸಾರ್ವಜನಿಕರಿಗೆ ಅರಿವು ಮೂಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನಂತರ ಲಸಿಕಾ ಅಭಿಯಾನದ ಪೋಸ್ಟರ್ ಬಿಡುಗಡೆಗೊಳಿಸಿದರು.

ಪಶುಪಾಲನಾ ಇಲಾಖೆ ಡಿಡಿ ಡಾ.ಪಿ.ಎಂ.ಮಲ್ಲಯ್ಯ, ಯಲಬುರ್ಗಾ ಸಹಾಯಕ ನಿರ್ದೇಶಕ ಡಾ.ಪ್ರಕಾಶ, ಕೊಪ್ಪಳ ಸಹಾಯಕ ನಿರ್ದೇಶಕ ಡಾ.ವಿನೋದ ಕುವಾರ್, ಕುಕನೂರ ಸಹಾಯಕ ನಿರ್ದೇಶಕ ಡಾ.ಸುರೇಶ್ ಇತರರಿದ್ದರು.