ಕಡೂರು ತಾಪಂ ಆವರಣದಲ್ಲಿರುವ ಸಾಮರ್ಥ್ಯ ಸೌಧದಲ್ಲಿ ಆಯೋಜಿಸಿದ್ದ ಡಿಜಿ ವಿಕಸನ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆ ಗೆ ಆಗಮಿಸಿದ್ದ ಗ್ರಂಥಾಲಯ ಸಿಬ್ಬಂದಿ. ಶಿಕ್ಷಣ ಫೌಂಡೇಷನ್ ಜಿಲ್ಲಾ ಸಂಯೋಜಕ ಎಚ್.ನವೀನ್‌ಕುಮಾರ್, ದಿನೇಶ್, ವೈ.ಎಸ್.ತನುಜಾ ಇತರರಿದ್ದರು. 
ಜಿಲ್ಲೆ

ಓದುಗರನ್ನು ಆಕರ್ಷಿಸುವಂತಿರಲಿ ಗ್ರಂಥಾಲಯ

ಎಸ್.ಎನ್.ರವೀಂದ್ರ

ಕಡೂರು: ಸರ್ಕಾರ ಮತ್ತು ಶಿಕ್ಷಣ ಫೌಂಡೇಷನ್ ನೀಡಿರುವ ಸಂಪನ್ಮೂಲಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಹೆಚ್ಚು ಜನರು ಗ್ರಂಥಾಲಯಕ್ಕೆ ಬರುವಂತೆ ಗ್ರಂಥಾಲಯವನ್ನು ಆಕರ್ಷಣೀಯವಾಗಿ ಇಟ್ಟುಕೊಳ್ಳಬೇಕು ಎಂದು ತಾಪಂ ಇಒ ಸಿ.ಆರ್.ಪ್ರವೀಣ್ ತಿಳಿಸಿದರು.

ತಾಪಂ ಸಾಮರ್ಥ್ಯ ಸೌಧದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಡಿಜಿ ವಿಕಸನ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಶಿಕ್ಷಣ ಪಿಡಿಯನ್ನು 8 ರಿಂದ 10 ನೇ ತರಗತಿ ಮಕ್ಕಳು ಬಳಸಿಕೊಳ್ಳುವಂತೆ ತಿಳಿಸಬೇಕು. ಇದಕ್ಕಾಗಿ ಗ್ರಾಪಂನಲ್ಲಿರುವ ಕಸದ ವಾಹನಗಳಲ್ಲಿ ಪ್ರಚಾರ ಮಾಡಬಹುದು ಎಂದು ಹೇಳಿದರು.
ಶಿಕ್ಷಣ ಫೌಂಡೇಷನ್ ಜಿಲ್ಲಾ ಸಂಯೋಜಕ ಎಚ್.ನವೀನ್‌ಕುಮಾರ್ ಮಾತನಾಡಿ, ಸಂಜೀವಿನಿ ಸ್ವಸಹಾಯ ಸಂಘಗಳ ಮಹಿಳೆಯರಿಗೆ ಡಿಜಿಟಲ್ ತಂತ್ರಜ್ಞಾನ ತರಬೇತಿ ನೀಡಲು ಗ್ರಂಥಾಲಯ ಮೇಲ್ವಿಚಾರಕರನ್ನು ನೇಮಿಸಬೇಕು. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಶಿಕ್ಷಣ ಫೌಂಡೇಶನ್ ಮತ್ತು ಡೆಲ್ ಸಂಸ್ಥೆ ಸಹಯೋಗದಲ್ಲಿ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮವನ್ನು ತಾಲೂಕಿನ ಆಯ್ದ ಗ್ರಾಪಂಗಳಲ್ಲಿ ಅನುಷ್ಠಾನಗೊಳಿಸಲಾಗಿದೆ ಎಂದರು.
ಶಿಕ್ಷಣ ಫೌಂಡೇಷನ್ ಸಂಸ್ಥೆಯಿಂದ ಸಂಪನ್ಮೂಲಗಳ ಬಳಕೆ ಕೂಡ ಅತ್ಯುತ್ತಮ ರೀತಿಯಲ್ಲಿ ಆಗುತ್ತಿದೆ. ಇನ್ನಷ್ಟು ಪ್ರಚಾರ ನೀಡುವ ಮೂಲಕ ಡಿಜಿ ವಿಕಸನ ಕಾರ್ಯಕ್ರಮ ಮನೆ ಮನೆಗೆ ತಲುಪುವಂತೆ ನೋಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿರುವ ಸಂಜೀವಿನಿ ಸ್ವಸಹಾಯ ಸಂಘಗಳ ಮಹಿಳೆಯರಿಗೆ ಮೊಬೈಲ್ ಬಳಕೆ, ಡಿಜಿಟಲ್ ಪೇಮೆಂಟ್, ಇ ಮೇಲ್ ಬಳಕೆ ಇತರ ಡಿಜಿಟಲ್ ತಂತ್ರಜ್ಞಾನದ ಬಳಕೆ ತರಬೇತಿ ನೀಡಲಾಗುವುದು. ಕಾರ್ಯಕ್ರಮ ಯಶಸ್ವಿಗೆ ಗ್ರಂಥಾಲಯ ಮೇಲ್ವಿಚಾರಕರು ಶಿಕ್ಷಣ ಫೌಂಡೇಷನ್ ಜತೆ ಕೈಜೋಡಿಸಬೇಕು ಎಂದು ಹೇಳಿದರು.
ಪಂಚಾಯತ್ ರಾಜ್ ಇಲಾಖೆ ಎಡಿ ದಿನೇಶ್, ಶಿಕ್ಷಣ ಫೌಂಡೇಷನ್ ಜಿಲ್ಲಾ ಸಂಯೋಜಕ ಆನಂದ್ ರಾಥೋಡ್, ತಾಲೂಕು ನೋಡೆಲ್ ಆಫೀಸರ್ ವೈ.ಎಸ್.ತನುಜಾ ಇತರರಿದ್ದರು.