ಜಿಲ್ಲೆ

ಲ್ಯಾಪ್​ಟಾಪ್​ ಸದುಪಯೋಗವಾಗಲಿ

ಗೋಕಾಕ: ವಿದ್ಯಾರ್ಥಿಗಳ ಶೆಣಿಕ ಅನುಕೂಲಕ್ಕಾಗಿ ಲ್ಯಾಪ್​ಟಾಪ್​ ನೀಡಲಾಗುತ್ತಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಇಲ್ಲಿನ ಎನ್​ಎಸ್​ಎ್​ ಕಾರ್ಯಾಲಯದಲ್ಲಿ ಅರಬಾವಿ ಪಟ್ಟಣ ಪಂಚಾಯಿತಿ ಸಮಿತಿಯಿಂದ ಉನ್ನತ ವ್ಯಾಸಂಗ ಮಾಡುತ್ತಿರುವ ಮೆಡಿಕಲ್​ ಮತ್ತು ಇಂಜಿನಿಯರಿಂಗ್​ ವಿದ್ಯಾರ್ಥಿಗಳಿಗೆ ಬುಧವಾರ ಲ್ಯಾಪ್​ಟಾಪ್​ ವಿತರಿಸಿ ಮಾತನಾಡಿದರು. ನಗರೋತ್ಥಾನ ಯೋಜನೆಯಡಿ 4ರ ಹಂತದಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಡಿ ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್​ ವಿತರಿಸಲಾಗುತ್ತಿದೆ. ಉನ್ನತ ವ್ಯಾಸಂಗ ಮಾಡುತ್ತಿರುವ ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗುತ್ತಿದೆ. ಸರ್ಕಾರ ಇಂಥ ಅನೇಕ ಕಾರ್ಯಕ್ರಮ ಆಯೋಜಿಸಿದೆ ಎಂದರು.

ಅರಬಾವಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಸ್​ಸಿ, ಎಸ್ಟಿ ಕುಟುಂಬಗಳ ಲಾನುಭವಿಗಳಿಗೆ ಸೋಲಾರ್​ ವಿತರಿಸುವ ಕಾರ್ಯವು ಸಹ ನಡೆಯುತ್ತಿದೆ. ಸುಮಾರು 21 ಲ ರೂ. ವೆಚ್ಚದಲ್ಲಿ ಸೋಲಾರ್​ ಅಳವಡಿಕೆ ಮಾಡುತ್ತಿದ್ದು, 86 ಎಸ್ಸಿ ಮತ್ತು 22 ಎಸ್ಟಿ ಕುಟುಂಬಗಳನ್ನು ಲಾನುಭವಿಗಳಿಗಾಗಿ ಆಯ್ಕೆ ಮಾಡಲಾಗಿದೆ. ಟೆಂಡರ್​ ಪ್ರಕ್ರಿಯೆ ಮುಗಿದ ಬಳಿಕ ಲಾನುಭವಿಗಳಿಗೆ ಈ ಯೋಜನೆ ಸೌಲಭ್ಯ ತಲುಪಲಿದೆ ಎಂದು ತಿಳಿಸಿದರು.

ಅರುಣ ಗಾಡಿವಡ್ಡರ್​, ಸೌಭಾಗ್ಯ ಮಾದರ, ಸೌಂದರ್ಯ ಪೂಜೇರಿ, ಕೇದಾರ್ಲಿಂಗ ಮಾಳಿ, ವಿಶಾಲ ಸಮದವರ, ಮಹಾದೇವ ಕಡಲಗಿ ಅವರಿಗೆ ಲ್ಯಾಪ್​ಟಾಪ್​ ವಿತರಿಸಲಾಯಿತು. ಪಟ್ಟಣ ಪಂಚಾಯಿತಿ ಸದಸ್ಯರಾದ ನಿಂಗಪ್ಪ ಇಳಿಗೇರಿ, ಅಡಿವೆಪ್ಪ ಬಿಲಕುಂದಿ, ಸುರೇಶ ದೊಡ್ಡಲಿಂಗಣ್ಣವರ, ಬಾಳೇಶ ನಾನಪ್ಪಗೊಳ, ರಮೇಶ ಸಂಪಗಾವಿ, ಹಣಮಂತ ಕೇಂದಾರಿ, ಮುಖ್ಯಾಧಿಕಾರಿ ವಿನಾಯಕ ಬಬಲೇಶ್ವರ, ಕರೆಪ್ಪ ಗಡ್ಡಿ ಇತರರಿದ್ದರು.