ಜಿಲ್ಲೆ

ಒಳಪಂಗಡಗಳು ವೈಷಮ್ಯ ಬದಿಗೊತ್ತಿ ಒಂದಾಗಲಿ

ಹರೀಶ್​​ ಕೆ.ಸಿ.

ಬೆಂಗಳೂರು: ನಮ್ಮ ಸಮಾಜದಲ್ಲಿರುವ ಒಳಪಂಗಡಗಳು ಪರಸ್ಪರ ವೈಷಮ್ಯ ಮರೆತು ಒಂದಾಗಿ ಸಂಟನೆಗೆ ಬೆಂಬಲ ನೀಡಿದರೆ ಸಿಗಬೇಕಾಗಿರುವಂತಹ ಸೌಲಭ್ಯಗಳು ಸುಲಭವಾಗಿ ದೊರೆಯುತ್ತದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅಭಿಪ್ರಾಯಪಟ್ಟರು.

ಸದಾಶಿವನಗರದ ರಮಣಮಹರ್ಷಿ ರಸ್ತೆಯಲ್ಲಿರುವ ಮಹಾಸಭಾದ ಕಾರ್ಯಾಲಯದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ 3ನೇ ಬಾರಿ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದರು.

ಹೆಣ್ಣು, ಗಂಡು ಕೊಡುವ ಮತ್ತು ತರುವ ಮೂಲಕ ಉಪಪಂಗಡಗಳ ಮಧ್ಯೆ ಇರುವ ಅಂತರವನ್ನು ತಗ್ಗಿಸಲಾಗುವುದು. ಸಂಟನೆಯ ಬಲವರ್ಧನೆಗೆ ಎಲ್ಲರೂ ಸಹಕಾರ ನೀಡಬೇಕು. ಈ ಮೂಲಕ ಸಮಾಜಕ್ಕೆ ಸಿಗಬೇಕಾದ ನ್ಯಾಯಯುತ ಸೌಲಭ್ಯಗಳನ್ನು ಪಡೆಯಲು ಶ್ರಮಿಸುತ್ತೇನೆ. ಜತೆಗೆ, ನಮ್ಮ ಸಮಾಜದ ಇನ್ನಷ್ಟು ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು. ಮಹಾಸಭಾದ ಉದ್ದೇಶಗಳನ್ನು ಈಡೇರಿಸುವ ಕೆಲಸವನ್ನು ನೂತನ ಪದಾಧಿಕಾರಿಗಳು ಮಾಡಬೇಕು. ಕೆಲವರು 2 ಬಾರಿ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಆದರೆ, ನನ್ನನ್ನು 3 ಬಾರಿ ಅಧ್ಯಕ್ಷರನ್ನಾಗಿ ಮಾಡಿದ್ದಕ್ಕೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಸಮಾಜದ ಸಹಕಾರದೊಂದಿಗೆ ಇನ್ನಷ್ಟು ಒಳ್ಳೆಯ ಕೆಲಸ ಮಾಡಲಾಗುವುದು ಎಂದು ಶಾಮನೂರು ಶಿವಶಂಕರಪ್ಪ ತಿಳಿಸಿದರು.

ಮಹಾಸಭಾದ ಕೇರಳ, ಆಂಧ್ರಪ್ರದೇಶ ಘಟಕದ ನೂತನ ಅಧ್ಯಕ್ಷರು ಅಧಿಕಾರ ಸ್ವೀಕರಿಸಿದರು. ರಾಜ್ಯ ಟಕದ ನೂತನ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು. ಸಚಿವ ಈಶ್ವರ್​ ಖಂಡ್ರೆ, ರಾಷ್ಟ್ರೀಯ ಕಾರ್ಯದರ್ಶಿ ರೇಣುಕಾ ಪ್ರಸನ್ನ ಸೇರಿ ಮತ್ತಿತರರಿದ್ದರು.

ಸಮಾಜದ ಅಭಿವೃದ್ಧಿಗೆ ಹಲವು ರೂಪುರೇಷಗಳನ್ನು ಸಿದ್ಧಪಡಿಸಿಕೊಂಡಿದ್ದೇನೆ. ಮುಂದಿನ ಐದು ವರ್ಷ ಕಾಲ ಎಲ್ಲರ ಸಹಕಾರದೊಂದಿಗೆ, ರಾಷ್ಟ್ರೀಯ ಅಧ್ಯಕ್ಷರ ಮಾರ್ಗದರ್ಶನದೊಂದಿಗೆ ಸಂಘಟನೆ ಬಲಗೊಳಿಸಲು ಮುಂದಾಗುತ್ತೇನೆ.

| ಶಂಕರ್​ ಬಿದರಿ. ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಘಟಕದ ನೂತನ ಅಧ್ಯಕ್ಷ.