ಜಿಲ್ಲೆ

ಮಹಾತ್ಮರ ಆದರ್ಶ ಯುವ ಜನತೆ ಅಳವಡಿಸಿಕೊಳ್ಳಲಿ

ಬೆಳಗಾವಿ: ಕ್ಷೇತ್ರದ ಅನೇಕ ಕಡೆಗಳಲ್ಲಿ ಡಾ.ಬಾಬಾ ಸಾಹೇಬ ಅಂಬೇಡ್ಕರ್, ಛತ್ರಪತಿ ಶಿವಾಜಿ, ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಬಸವೇಶ್ವರ ಸೇರಿ ಮಹನೀಯರ ಪುತ್ಥಳಿ ಸ್ಥಾಪಿಸುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಸಂದೇಶ ರವಾನಿಸುವ ಕೆಲಸ ಮಾಡಲಾಗುತ್ತಿದೆ. ಯುವ ಜನಾಂಗ ಇಂತಹ ಆದರ್ಶ ವ್ಯಕ್ತಿಗಳಿಂದ ಸ್ಫೂರ್ತಿ ಪಡೆಯಬೇಕು ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.

ಗ್ರಾಮೀಣ ಕ್ಷೇತ್ರದ ಪಂತ ಬಾಳೇಕುಂದ್ರಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ ಬೃಹತ್ ಮೂರ್ತಿಯ ಪ್ರತಿಷ್ಠಾಪನೆಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮಸ್ಥರ ಬೇಡಿಕೆಯಂತೆ ಎಲ್ಲರ ಸಹಕಾರದೊಂದಿಗೆ ಕ್ಷೇತ್ರದಲ್ಲಿ, ಮೂಲಭೂತ ಸೌಲಭ್ಯ ಅಭಿವೃದ್ಧಿ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುತ್ತಿದ್ದಾರೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನೀಲ ನಕ್ಷೆ ಸಿದ್ಧಪಡಿಸಲಾಗಿದ್ದು, ಹಂತ ಹಂತವಾಗಿ ಜಾರಿಯಾಗಲಿವೆ ಎಂದು ಹೇಳಿದರು.

ತಾಪಂ ಮಾಜಿ ಅಧ್ಯಕ್ಷ ಶಂಕರಗೌಡ ಪಾಟೀಲ, ಕಾಂಗ್ರೆಸ್ ಯುವ ಮುಖಂಡ ಮೃಣಾಲ್ ಹೆಬ್ಬಾಳ್ಕರ್, ಕೆಡಿಪಿ ಸದಸ್ಯ ಬಸವರಾಜ ಮ್ಯಾಗೋಟಿ, ಗ್ರಾಪಂ ಅಧ್ಯಕ್ಷ ಗುಲಾಬಿ ಕೋಲಕಾರ, ಸದಸ್ಯರಾದ ಪಾರ್ವತಿ ತಳವಾರ, ಭಾಗ್ಯಶ್ರೀ ಹಣಬರ, ಮಲಿಕ್ ಮನಿಯಾರ್, ಇಸ್ಮಾಯಿಲ್ ಮಕಾನದಾರ, ಬುಡಾ ಸದಸ್ಯರಾದ ನಿಲೇಶ್ ಚಂದಗಡ್ಕರ್, ಮಲ್ಲೇಶ ಚೌಗುಲೆ, ಮಹಾದೇವ ತಳವಾರ, ಗುಂಡು ತಳವಾರ, ಅಪ್ಸರ್ ಜಮಾದಾರ, ಸುರೇಶ ಕಾಳೋಜಿ, ಹೊನಗೌಡ ಪಾಟೀಲ, ಪ್ರವೀಣ ಪಾಟೀಲ, ಸುರೇಶ ಕಟಬುಗೋಳ, ನೂರ್ ಮುಲ್ಲಾ, ಜಮೀಲ್ ಕಾಜಿ, ಶರೀಫ್ ಸನದಿ, ಮಹೇಶ ಸುಗ್ನೆಣ್ಣವರ, ಉದಯ ಪಾಟೀಲ, ಶಶಾಂಕ ಪಾಟೀಲ, ಪಿಡಿಒ ಕೃಷ್ಣ ಪಾಟೀಲ, ಮಹಾಂತೇಶ ನಾಯಕ, ಸಂತೋಷ ಕೋಲಕಾರ, ಪ್ರಮೋದ ಮೂಡಲಗಿ ಇತರರಿದ್ದರು.