ಮೈಸೂರು: ದೇಶದಲ್ಲೇ ಮೈಸೂರು ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಲು ಮೈಸೂರು ಮಹಾರಾಜರು ಕಾರಣ ಎಂದು ಬಿಜೆಪಿ ಮಾಧ್ಯಮ ವಕ್ತಾರ ಎಂ.ಎ.ಮೋಹನ್ ತಿಳಿಸಿದ್ದಾರೆ.
ಅವರು ಹತ್ತಾರ ಅರಮನೆ, ಪಾರಂಪರಿಕ ಕಟ್ಟಡಗಳನ್ನು ಮೈಸೂರಿನಲ್ಲಿ ನಿರ್ಮಿಸಿದ್ದಾರೆ. ಜಗನ್ಮೋಹನ ಅರಮನೆ, ಜಯಲಕ್ಷ್ಮೀವಿಲಾಸ ಸೇರಿದಂತೆ ಮಹಾರಾಜ ನಿರ್ಮಿಸಿರುವ ಎಲ್ಲ ಪಾರಂಪರಿಕ ಕಟ್ಟಡಗಳನ್ನು ರಕ್ಷಿಸಿ, ಪ್ರವಾಸಿತಾಣಗಳನ್ನಾಗಿ ಅಭಿವೃದ್ಧಿಪಡಿಸಬೇಕು. ನಗರದ ಪ್ರವಾಸಿತಾಣಗಳಲ್ಲಿ ಪ್ರವಾಸಿಗರಿಗೆ ನಿತ್ಯ ಮೋಸ ನಡೆಯುತ್ತಿದೆ. ಪ್ರವಾಸಿಗರಿಗೆ ನಕಲಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಮೊದಲು ಇದನ್ನು ತಪ್ಪಿಸುವ ಕೆಲಸ ಆಗಬೇಕು ಎಂದು ತಿಳಿಸಿದ್ದಾರೆ.