K.SHANTHAPPA 
ಜಿಲ್ಲೆ

ಹಿAದುಳಿದ ವರ್ಗಕ್ಕೆ ಬಜೆಟ್‌ನಲ್ಲಿ ಅನುದಾನ ಬಿಡುಗಡೆ ಮಾಡಲಿ

Raichur - Reporter - Rachhai Swamy

ರಾಯಚೂರು ಹಿಂದುಳಿದ ವರ್ಗಗಳ ಆರ್ಥಿಕ ಮತ್ತು ಶೈಕ್ಷಣಿಕ ಗಣತಿ ವರದಿಯನ್ನು ಸರ್ಕಾರ ಬಹಿರಂಗಪಡಿಸಿ ಬಜೆಟ್‌ನಲ್ಲಿ ಹಿಂದುಳಿದ ವರ್ಗದ ೧೩ ನಿಗಮಗಳಿಗೆ ಜನಸಂಖ್ಯೆ ಆಧಾರವಾಗಿ ಅನುದಾನ ಹಂಚಿಕೆ ಮಾಡಬೇಕು ಎಂದು ಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಶಾಂತಪ್ಪ ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂತರಾಜ್ ವರದಿಯಲ್ಲಿ ಏನಿದೆ ಎಂಬುದನ್ನು ತಿಳಿಯದೇ ಕೆಲವರು ವಿರೋಽಸುತ್ತಿದ್ದಾರೆ.ಸರ್ಕಾರ ಮೊದಲ ವರದಿ ಬಹಿರಂಗಪಡಿಸಿದರೆ ಏನಿದೆ, ಏನಿಲ್ಲ ಎಂಬಾದರೂ ತಿಳಿ ಯುತ್ತದೆ. ರಾಜ್ಯ ಸರ್ಕಾರ ಜಾರಿ ಗೊಳಿಸುವದಾಗಿ ಹೇಳುತ್ತಲೇ ಇದೆ ಹೊರತು ಜಾರಿಗೆ ಮುಂದಾಗು ತ್ತಿಲ್ಲ. ಕೂಡಲೇ ಸಚಿವ ಸಂಪುಟದಲ್ಲಿ ಚರ್ಚಿಸಿ ಬಹಿರಂಗಪಡಿಸಬೇಕು. ಹಿಂದುಳಿದ ಜಾತಿಯ ೧೩ ಬೇರೆ ಬೇರೆ ಜಾತಿ ಜನಾಂಗಳ ಅಭಿವೃದ್ದಿ ನಿಗಮಗಳನ್ನು ಸರ್ಕಾರಗಳು ಸ್ಥಾಪಿಸಿವೆ. ಆದರೆ ಸರ್ಕಾರ ಅನುದಾನವೇ ನೀಡಿಲ್ಲ. ನೀಡಿದರೂ ಖರ್ಚು ಮಾಡುತ್ತಿಲ್ಲ. ಬಜೆಟನಲ್ಲಿ ೫ ಸಾವಿರ ಕೋಟಿ ರೂ ಅನುದಾನವನ್ನು ಹಿಂದುಳಿದ ವರ್ಗಗಳ ನಿಗಮಕ್ಕೆ ನೀಡಬೇಕೆಂದು ಒತ್ತಾಯಿಸಿದರು.

ನ್ಯಾಯವಾದಿ ವೈ.ಶ್ರೀಕಾಂತರಾವ್ ಮಾತನಾಡಿ, ಕಾಂತರಾಜ್ ಆಯೋಗ ವರದಿ ಜಾರಿಯಲ್ಲಿ ಸರ್ಕಾರ ಮೀನಮೇಷ ಮಾಡುತ್ತಿದೆ.ಸರ್ಕಾರಗಳ ಬಳಿ ಕಾಂತರಾಜ್ ಆಯೋಗದೊಂದಿಗೆ ಜಯಪ್ರಕಾಶ ಹೆಗಡೆಯವರು ಪೂರ್ಣಗೊಳಿಸಿರುವ ವರದಿಯಿದೆ. ಆದರೆ ಬಹಿರಂಗಪಡಿಸದೇ ಇರುವದರಿಂದ ಸಮೂದಾಯಗಳಿಗೆ ಅನ್ಯಾಯ ಮುಂದುವರೆಯುವAತಾಗಿದೆ. ನಿಗಮ ಮಂಡಳಿಗಳು ಸಮರ್ಪಕ ಅನುದಾನ ಇಲ್ಲದೇ ಸಮೂದಾಯಗಳ ಅಭಿವೃದ್ದಿನಿರೀಕ್ಷಿಸಲುಆಗುವದಿಲ್ಲ. ಬಜೆಟ್‌ನಲ್ಲಿ ಹೆಚ್ಚು ಅನುದಾನನೀಡಬೇಕೆಂದರು.

ಈ ಸಂದರ್ಬದಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಹನುಮಂತಪ್ಪ ಯಾದವ, ಖಾಜನಗೌಡ, ಬಿ.ಬಸವರಾಜ,ಸುರೇಖಾ, ವಿಜಯಭಾಸ್ಕರ ಇಟಗಿ, ಪಾಗುಂಟಪ್ಪ, ಆಂಜಿನೇಯ್ಯ ಯಾದವ ಇದ್ದರು.