ಜಗಳೂರು: ಸರ್ಕಾರ ಗುತ್ತಿಗೆದಾರರ ಸಮಸ್ಯೆ, ನೋವು ಆಲಿಸಿ, ಪರಿಹಾರ ಕೊಡಬೇಕು ಎಂದು ಗುತ್ತಿಗೆದಾರ ಮಾರನಾಯಕ ಮನವಿ ಮಾಡಿದರು.
ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಆಯ್ಕೆ ಹಾಗೂ ಸಂಘದ ಬೆಳೆವಣಿಗೆ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಗುತ್ತಿಗೆದಾರರ ಜೀವನ ಮುಳ್ಳಿನ ಹಾಸಿಗೆ ಇದ್ದಂತೆ. ಸರ್ಕಾರದ ದಿಢೀರ್ ನಿರ್ಧಾರದಿಂದ ಜೀವವೇ ಕಳೆದುಕೊಳ್ಳುವಂತಾಗುತ್ತದೆ. ಗುತ್ತಿಗೆದಾರರ ಸಮಸ್ಯೆ ಅರಿತು ಮುಂದಾಗಬೇಕು ಎಂದರು.
ಗುತ್ತಿಗೆದಾರ ಅಂಜಿನಪ್ಪ, ಗುತ್ತಿಗೆದಾರರಾದ ಮಾಳಮ್ಮನಹಳ್ಳಿ ವೆಂಕಟೇಶ್, ಬಂಗಾರಕ್ಕನ ಗುಡ್ಡ ಅಂಜಿನಪ್ಪ, ಮಾಳಮ್ಮನಹಳ್ಳಿ ಆನಂದ್, ಮಹಾಂತೇಶ್, ಬುಳ್ಳಳ್ಳಿ ರಾಜಪ್ಪ, ತಮಲೇಹಳ್ಳಿ ಮುದಿಯಪ್ಪ, ಮರೇನಹಳ್ಳಿ ನಾಗರಾಜ್, ಕಾನನಕಟ್ಟೆ ಮಹೇಶ್, ಅರವಿಂದ್ ಪಟೀಲ್, ಮೂರ್ತಿನಾಯ್ಕ, ಹನುಮಂತ ಪಲ್ಲಾಗಟ್ಟೆ, ಕಣ್ವಕುಪ್ಪೆ ಲೋಕೇಶ್, ಮಲ್ಲಿಕಾರ್ಜುನ ಬಂಗಾರಕ್ಕನಗುಡ್ಡ ಇತರರಿದ್ದರು.