ಗಂಗಾವತಿ ತಾಲೂಕು ವಕೀಲರ ಸಂಘದ ಸದಸ್ಯರು ಸಂಘದ ಕಚೇರಿ ಮುಂದೆ ಮೌನಪ್ರತಿಭಟನೆ ನಡೆಸಿದರು. ಸಂಘದ ತಾಲೂಕು ಅಧ್ಯಕ್ಷ ಎಸ್.ಎನ್.ನಾಯಕ, ಉಪಾಧ್ಯಕ್ಷ ಪ್ರಕಾಶ ಕುಸಬಿ, ಪದಾಧಿಕಾರಿಗಳಾದ, ಎ.ಜಿ.ಅರುಣ್, ಬೆಂಚಮಟ್ಟಿ ಮಲ್ಲಪ್ಪ, ಡಿ.ಎ.ಹಾಲಸಮುದ್ರ, ಕೆ.ಆರ್.ದೇಶಪಾಂಡೆ, ಎಂ. ಪಂಪನಗೌಡ, ಸೋಮನಾಥ್ ಪಟ್ಟಣಶೆಟ್ಟಿ ಇತರರಿದ್ದರು. 
ಜಿಲ್ಲೆ

ವಕೀಲರಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡಲಿ

ಗಂಗಾವತಿ: ರಾಜ್ಯ ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷ ಸದಾಶಿವರಡ್ಡಿಯವರ ಮೇಲೆ ನಡೆದ ಹಲ್ಲೆ ಘಟನೆ ಖಂಡಿಸಿ ತಾಲೂಕು ವಕೀಲರ ಸಂಘದ ಸದಸ್ಯರು ನಗರದ ವಕೀಲರ ಸಂಘದ ಕಚೇರಿ ಮುಂದೆ ಸೋಮವಾರ ಮೌನಪ್ರತಿಭಟನೆ ನಡೆಸಿದರು.

ಘಟನೆ ಕುರಿತು ತುರ್ತು ಸಭೆ ಕರೆದ ಸಂಘದ ಪದಾಧಿಕಾರಿಗಳು, ಕೈಗೆ ಕೆಂಪು ಪಟ್ಟಿಕಟ್ಟಿಕೊಂಡು ಪ್ರತಿಭಟಿಸಿದರು. ಬೇಡಿಕೆ ಮನವಿಯನ್ನು ಗ್ರೇಡ್ -2 ತಹಸೀಲ್ದಾರ್ ಮಹಾಂತಗೌಡ ಗೌಡರ್‌ಗೆ ಸಲ್ಲಿಸಿದರು. ಸಂಘದ ಕಾರ್ಯದರ್ಶಿ ಎಚ್.ಎಂ.ಮಂಜುನಾಥ ಮಾತನಾಡಿ, ಹಿರಿಯ ವಕೀಲರ ಮೇಲಿನ ಹಲ್ಲೆ ಖಂಡನೀಯವಾಗಿದ್ದು, ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಬೇಕಿದೆ. ವಕೀಲರ ರಕ್ಷಣೆಗೆ ಕಠಿಣ ಕಾಯ್ದೆಯನ್ನು ರಾಜ್ಯ ಸರ್ಕಾರ ಜಾರಿಗೆ ತರಬೇಕಿದೆ. ಇಂತಹ ಘಟನೆ ಮರುಕಳಿಸದಂತೆ ವಕೀಲರಿಗೆ ಸೂಕ್ತ ರಕ್ಷಣೆ ನೀಡುವಂತೆ ಒತ್ತಾಯಿಸಿದರು.

ವಕೀಲರಾದ ಅನಂತ್ ರಾವ್, ಎಂ ಗಂಗಾಧರ, ಕೆ.ಕಷ್ಣಪ್ಪ, ಚನ್ನಪ್ಪ ಮಳಗಿ, ಸೈಯ್ಯದ್ ಹಾಶಮುದ್ದಿನ್, ಸೌಭಾಗ್ಯ ಲಕ್ಷ್ಮೀ, ರಾಜೇಶ್ವರಿ, ನಾಗರಾಜ ನಾಯಕ್, ಮರಿಯಪ್ಪ, ಮಂಜುನಾಥ ತಾಳೂರು, ವೆಂಕಟೇಶ್ ಗೌಡ ಇತರರಿದ್ದರು.