ಜಿಲ್ಲೆ

ರೈತರ ರಕ್ಷಣೆಗೆ ಸರ್ಕಾರ ಮುಂದಾಗಲಿ

ಶೃಂಗೇರಿ: ಅನ್ನದಾತರಾದ ರೈತರು ಇಂದಿಗೂ ನೆಮ್ಮದಿ ಜೀವನ ಕಂಡುಕೊಳ್ಳಲು ಸಾಧ್ಯವಾಗಿಲ್ಲ ಎಂದು ಕೃಷಿಕ ಸಮಾಜದ ನಿರ್ದೇಶಕ ಕೆ.ಎನ್.ಗೋಪಾಲಹೆಗ್ಡೆ ಹೇಳಿದರು.

ಆನೆಗುಂದದಲ್ಲಿರುವ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ಏರ್ಪಡಿಸಿದ್ದ ರೈತ ದಿನಾಚರಣೆ ಕಾರ್ಯಕ್ರಮದದಲ್ಲಿ ಮಾತನಾಡಿ, ಹವಮಾನ ವೈಪರಿತ್ಯ, ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ನಿಗದಿಯಾಗದಿರುವುದು, ಕಾರ್ಮಿಕರ ಕೊರತೆ ಮುಂತಾದ ಸಮಸ್ಯೆಯಿಂದ ಅನ್ನದಾತರು ಸಂಕಷ್ಟದಲ್ಲಿದ್ದಾರೆ.

ಸರ್ಕಾರ ಉದ್ಯಮಿಗಳಿಗೆ , ಇತರೆ ವರ್ಗಗಳಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನೆರವು ನೀಡುತ್ತಿದೆ. ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ದೊರೆಯದೆ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಶೂನ್ಯ ಬಡ್ಡಿದರದ ಸಾಲ ಇನ್ನೂ ಎಲ್ಲ ರೈತರಿಗೆ ತಲುಪಲು ಸಾಧ್ಯವಾಗಿಲ್ಲ.ರೈತರ ರಕ್ಷಣೆಗೆ ಸರ್ಕಾರ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.

ತಹಸೀಲ್ದಾರ್ ಅನೂಪ್ ಮಾತನಾಡಿ, ದೇಶದಲ್ಲಿ ರೈತರು ಆರ್ಥಿಕ ಪ್ರಗತಿಯಲ್ಲಿ ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗಿಲ್ಲ. ಸೇವಾ ಕ್ಷೇತ್ರದ ಜಿಡಿಪಿ ಪ್ರಮಾಣ ಹೆಚ್ಚಿದ್ದು, ಕೃಷಿ ಕ್ಷೇತ್ರದ ಜಿಡಿಪಿ ಪ್ರಮಾಣ ಕುಸಿದಿದೆ ಎಂದರು.

ಪ್ರಗತಿಪರ ರೈತ ಮಹಿಳೆ ಕಲ್ಕುಳಿ ಶ್ರೀಕ್ರಾಂತಿ ತಿಮ್ಮಪ್ಪ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರಣ್ಯಪುರ ಗ್ರಾಪಂ ಅಧ್ಯಕ್ಷ ಪ್ರವೀಣ ಪೂಜಾರಿ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶ್ರೀಕೃಷ್ಣ, ಶ್ರೀಧರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಬಿ.ಮಹೇಶ್, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಜಯಪ್ರಕಾಶ್, ಸರಸ್ವತಿ, ರೇಣುಕಾ, ವರ್ಷಿಣಿ ಇದ್ದರು.