ಜಿಲ್ಲೆ

ಸರ್ಕಾರ ಆಡಳಿತಾಧಿಕಾರಿ ನೇಮಿಸಲಿ

ಎಸ್.ಎರ್ರಿಸ್ವಾಮಿ

ಬಳ್ಳಾರಿ ; ಕಸಾಪ ಹಾಲಿ ಅಧ್ಯಕ್ಷ ಡಾ.ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ರಾಜ್ಯದಲ್ಲಿ ನಡೆದ ಎರಡು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೆಚ್ಚ ಪರಿಶೀಲಿಸಲು ಸರ್ಕಾರ ಆಡಳಿತಾಧಿಕಾರಿಯನ್ನು ನೇಮಿಸಲಿ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಡಾ. ವಸುಂಧರ ಭೂಪತಿ ಆಗ್ರಹಿಸಿದರು.

ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಎರಡು ಸಮ್ಮೇಳನದಲ್ಲಿ ಅವ್ಯವಹಾರ ಹಾಗೂ ಹಣದ ದುರುಪಯೋಗವಾಗಿದ್ದರೆ, ಕಸಾಪ ಚುನಾವಣೆ ನಡೆಯುವರೆಗೆ ಆಡಳಿತಧಿಕಾರಿಯೇ ಕಸಾಪದ ನೇತೃತ್ವ ವಹಿಸಲಿ. ಯಾವುದೇ ಅವ್ಯವಹಾರ ನಡೆದಿಲ್ಲ ಎಂಬ ವರದಿಯನ್ನು ಆಡಳಿತಧಿಕಾರಿ ನೀಡಿದರೆ ಅಧ್ಯಕ್ಷರಾಗಿ ಡಾ.ಮಹೇಶ್ ಜೋಶಿ ಮುಂದುವರೆಯಲಿ ಎಂದು ಹೇಳಿದರು.

ಜಿಲ್ಲೆಯಲ್ಲಿ ನಡೆಯುವ ಪ್ರಸ್ತಕ ಸಾಲಿನ ಸಾಹಿತ್ಯ ಸಮ್ಮೇಳನಕ್ಕೆ ನಲವತ್ತು ಕೋಟಿ ರೂ. ಅನುದಾನವಾದರೂ ಏಕೆ ಎಂದು ಪ್ರಶ್ನಿಸಿದರು. ಸಮ್ಮೇಳನ ಎಂಬದು ಕಲೆ, ಸಂಸ್ಕ್ರತಿ, ಸಾಹಿತ್ಯ, ವಾಸ್ತುಶಿಲ್ಪಗಳ ಅರಿವಿನ ರೀತಿಯಾಗಿ ನಡೆಯಬೇಕು ವಿನಃ ಯಾವುದು ಒಂದು ರಾಜಕೀಯ ಪಕ್ಷದ ವೇದಿಕೆ ಹಾಗೂ ಅಬ್ಬರದ ಜಾತ್ರೆಯಂತೆ ಅಪವ್ಯಯವಾಗಬಾರದು ಎಂದು ಟೀಕಿಸಿದರು.

ರಾಜ್ಯದಲ್ಲಿ ಹಲವು ಸಾಹಿತಿಗಳ ಹೋರಾಟ ಕಸಾಪ ವಿರುದ್ಧವಲ್ಲ, ಹಾಲಿ ಅಧ್ಯಕ್ಷ ಡಾ.ಮಹೇಶ್ ಜೋಶಿ ವಿರುದ್ದವಾಗಿದೆ. ಕಸಾಪದಿಂದ ರಾಜ್ಯಮಟ್ಟದಲ್ಲಿ ದತ್ತಿ ಹಾಗೂ ವಿಚಾರ ಸಂಕಿರಣಗಳು ನಡೆದಿಲ್ಲ. ನಾಡ ನುಡಿಯ ಬಗ್ಗೆ ಈವರೆಗೆ ಒಂದು ಚಕಾರವೂ ಎತ್ತಿಲ್ಲ. ಕಸಾಪ ಅಧ್ಯಕ್ಷರಾಗಿ ಜಿಲ್ಲಾಧ್ಯಕ್ಷರ ಮೇಲೆ ಆಡಳಿತ ನಡೆಸುವದಕ್ಕೆ ಹೊರತು ಸಾಹಿತ್ಯ ಚಟುವಟಿಕೆಗಳ ಎಂಬಂತೆ ವರ್ತಿಸುತ್ತಿದ್ದಾರೆ. ಸಾಹಿತ್ಯ ಪರಿಷತ್ ಕಾರ್ಯಕ್ರಮದಲ್ಲಿ ಪದೇಪದೆ ಕುಟುಂಬದವರಿಗೆ ಅವಶ್ಯಕತೆ ನೀಡುವುದು ಉದ್ದೇಶವಾದರೂ ಏನು ಎಂದು ಕಿಡಿಕಾರಿದರು.

ಪ್ರಜಾಪ್ರಭುತ್ವ ಆಡಳಿತ ಅಂಕುಶ ಈವರೆಗೂ ಸಾಹಿತ್ಯ ಪರಿಷತ್ ಮೇಲೆ ಇಲ್ಲ. ಮಾಜಿ ಅಧ್ಯಕ್ಷರು ಹಾಗೂ ಆಳ್ವಿಕೆ ನಡೆಸಿದ ಎಲ್ಲ ಪಕ್ಷಗಳ ಸರ್ಕಾರಗಳು ಸ್ವಾಯತ್ತತೆ ಬಳಸಿಕೊಂಡಿಲ್ಲ. ಆದರೆ, ಅಧ್ಯಕ್ಷ ಡಾ.ಮಹೇಶ್ ಜೋಶಿ ಪ್ರತಿಯೊಂದು ಮಾತಿನಲ್ಲಿ ಸಾಹಿತ್ಯ ಚಟುವಟಿಕೆಗಳಲ್ಲದೆ ಅಸಾಹಿತ್ಯ ಚಟುವಟಿಕೆ ನಡೆಸಿದ್ದಾರೆ. ದ್ವೇಷ, ದಬ್ಬಾಳಿಕೆ ಹಾಗೂ ದುರದ್ದೇಶ ರೀತಿಯಾಗಿ ನಡೆಸಿಕೊಂಡಿದ್ದಾರೆ. ಪಕ್ಷದ ರಾಜಕಾರಣವನ್ನು ಸಾಹಿತ್ಯಕ್ಕೆ ತಂದಿದ್ದಾರೆ. ಬೈಲಾ ವಿಕೇಂದ್ರೀಕರಣ ವಿರೋಧಿಸಿ ಕೇಂದ್ರಿಕರಣದಂತೆ ಬದಲಾವಣೆ ಮಾಡಿ ತಿದ್ದುಪಡಿ ಮಾಡಲು ಹೊರಟಿದ್ದು ಆರ್ಥಿಕ ದುರಡಾಳಿತನ ಎಲ್ಲೆ ಮೀರಿದೆ ಎಂದು ಗುಡುಗಿದರು.

ಸಾಹಿತಿಗಳಾದ ಜಾಣಗಿರಿ ವೆಂಕಟರಾಮಯ್ಯ, ಪ್ರೊ.ಎಸ್.ಸಿದ್ದರಾಮಯ್ಯ, ಜಯಪ್ರಕಾಶಗೌಡ, ಡಾ.ಮೀರಾ ಶಿವಲಿಂಗಯ್ಯ ಇದ್ದರು.